ವಾಟ್ಸಪ್ ಡಿಪಿ ಫೋಟೋಗಾಗಿ ಠಾಣೆ ಮೆಟ್ಟಿಲೇರಿದ ಪತ್ನಿ..!

Wife reaches out to police over husband not putting couple dp
Highlights

ಸಾಮಾಜಿಕ ಜಾಲತಾಣಗಳು ಮನುಷ್ಯನಿಗೆ ಅದೆಷ್ಟು ಸಹಾಯಕಾರಿಯೋ ಅಷ್ಟೇ ಹಾನಿಯನ್ನುಂಟು ಮಾಡಬಲ್ಲವು ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಇದೆ. ಆದರೆ ಈ ಜೋಡಿಯ ಜಗಳ ಶುರುವಾಗಿದ್ದೇ ಊಟ ಆದ ಮೇಲೆ ವಾಟ್ಸಪ್ ನೋಡುತ್ತಾ ಕುಳಿತ ಮೇಲೆ.

ಗಾಜಿಯಾಬಾದ್ [ಮೇ. 25]: ಸಾಮಾಜಿಕ ಜಾಲತಾಣಗಳು ಮನುಷ್ಯನಿಗೆ ಅದೆಷ್ಟು ಸಹಾಯಕಾರಿಯೋ ಅಷ್ಟೇ ಹಾನಿಯನ್ನುಂಟು ಮಾಡಬಲ್ಲವು ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಇದೆ. ಆದರೆ ಈ ಜೋಡಿಯ ಜಗಳ ಶುರುವಾಗಿದ್ದೇ ಊಟ ಆದ ಮೇಲೆ ವಾಟ್ಸಪ್ ನೋಡುತ್ತಾ ಕುಳಿತ ಮೇಲೆ.

ಉತ್ತರಪ್ರದೇಶದ ಸಾಹಿಬಾಬಾದ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವಾಟ್ಸಪ್ ಡಿಪಿಯಲ್ಲಿ ತನ್ನ ಜೊತೆಗಿರುವ ಫೋಟೋ ಹಾಕದ ಕಾರಣಕ್ಕೆ ಪತ್ನಿಯೋರ್ವಳು ತನ್ನ ಪತಿಯ ವಿರುದ್ದ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದಾಳೆ. ಒಂದು ತಿಂಗಳ ಹಿಂದೆ ಈ ಜೋಡಿ ಪ್ರವಾಸಕ್ಕೆ ಹೋದಾಗ ಅಲ್ಲಿ ಕೆಲವು ಫೋಟೋಗಳನ್ನು ತೆಗೆದುಕೊಂಡಿದ್ದರು. ಇವುಗಳ ಪೈಕಿ ಒಂದನ್ನು ಡಿಪಿ ಹಾಕುವಂತೆ ಪತ್ನಿ ಒತ್ತಾಯಿಸಿದ್ದಾಳೆ. 

ಆದರೆ ಇದಕ್ಕೊಪ್ಪದ ಪತಿ ತಾನೊಬ್ಬನೇ ಇರುವ ಫೋಟೋ ಹಾಕಿದಾಗ ಕುಪಿತಗೊಂಡ ಪತ್ನಿ ಆತನ ವಿರುದ್ದ ದೂರು ದಾಖಲಿಸಿದ್ದಾಳೆ.  ಇತ್ತಿಚೀಗೆ ಕೌಟುಂಬಿಕ ಕಲಹಗಳು ಹೆಚ್ಚಾಗಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದು, ಹಲವು ಪ್ರಕರಣಗಳನ್ನು ಕೌನ್ಸಲಿಂಗ್ ಮೂಲಕವೇ ಬಗೆಹರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಡಿಪಿ ಗಲಾಟೆಯಿಂದಾಗಿ ಪತಿ-ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಮಾತ್ರ ವಿಪಯಾರ್ಯಾಸ.

loader