ಮಳೆಯಿಂದಾಗಿ ಹಾಳಾಗಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯ ಹಾಗೂ ಮಳೆಹಾನಿ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕೆಂದು ನೂತನ ಮೇಯರ್ ಆಗಿ ಆಯ್ಕೆ ಯಾಗಿರುವ ಆರ್.ಸಂಪತ್‌ರಾಜ್ ಅವರಿಗೆ ಪತ್ನಿ ಕವಿತಾ ಸಲಹೆಯುತವಾಗಿ ಆಗ್ರಹಿಸಿದ್ದಾರೆ.

ಬೆಂಗಳೂರು(ಸೆ.29): ಮಳೆಯಿಂದಾಗಿ ಹಾಳಾಗಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯ ಹಾಗೂ ಮಳೆಹಾನಿ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕೆಂದು ನೂತನ ಮೇಯರ್ ಆಗಿ ಆಯ್ಕೆ ಯಾಗಿರುವ ಆರ್.ಸಂಪತ್‌ರಾಜ್ ಅವರಿಗೆ ಪತ್ನಿ ಕವಿತಾ ಸಲಹೆಯುತವಾಗಿ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಲಿಕೆಯ ಪೌರ ಸಭಾಂಗಣದಲ್ಲಿ ಗುರುವಾರ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ತಮ್ಮ ಮಕ್ಕಳೊಂದಿಗೆ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದ ಅವರು, ತಮ್ಮ ಪತಿ ಮೇಯರ್ ಆಗಿ ಆಯ್ಕೆಯಾದ ಸಂತಸದ ಸಂದರ್ಭವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಪತಿಯೇ ಮೇಯರ್ ಆಗಿರುವುದರಿಂದ ನಿಮ್ಮ ಆಗ್ರಹ ಏನಾಗಿರುತ್ತದೆ ಎಂಬ ಪ್ರಶ್ನೆಗೆ, ಮೊದಲು ಅವರು ಮಳೆ ಹಾನಿ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ಸಮಸ್ಯೆಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗುಂಡಿಬಿದ್ದು ಹಾಳಾಗಿ ರುವ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.