ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ಯಲ್ಲಿ ಘಟನೆ ನಡೆದಿದ್ದು, ಅಮರೇಶ್ ತಂದೆ ಹನುಮಂತ ಎಂಬ 35 ವಯಸ್ಸಿನ ವ್ಯಕ್ತಿಯನ್ನು ಆತನ ಪತ್ನಿ ದುರಗಮ್ಮ ಎಂಬಾಕೆ ಜೀವಂತವಾಗಿ ಗಂಡನನ್ನು ಸುಟ್ಟು ಹಾಕಿದ್ದಾಳೆ. ಈ ಕುರಿತು ವಿಷಯ ತಿಳಿದ ಹಟ್ಟಿ ಪೊಲೀಸರು ಪತ್ನಿ ದುರಗಮ್ಮಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಗಂಡ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಹೀಗೆ ಮಾಡಿರುವುದಾಗಿ ದುರಗಮ್ಮ ಹೇಳಿದ್ದಾಳೆ ಎಂದು ತಿಳಿದುಬಂದಿದೆ.
ರಾಯಚೂರು(ನ.24): ಹೆಂಡತಿಯೇ ಗಂಡನ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತ ಸುಟ್ಟು ಹಾಕಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ಯಲ್ಲಿ ಘಟನೆ ನಡೆದಿದ್ದು, ಅಮರೇಶ್ ತಂದೆ ಹನುಮಂತ ಎಂಬ 35 ವಯಸ್ಸಿನ ವ್ಯಕ್ತಿಯನ್ನು ಆತನ ಪತ್ನಿ ದುರಗಮ್ಮ ಎಂಬಾಕೆ ಜೀವಂತವಾಗಿ ಗಂಡನನ್ನು ಸುಟ್ಟು ಹಾಕಿದ್ದಾಳೆ.
ಈ ಕುರಿತು ವಿಷಯ ತಿಳಿದ ಹಟ್ಟಿ ಪೊಲೀಸರು ಪತ್ನಿ ದುರಗಮ್ಮಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಗಂಡ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಹೀಗೆ ಮಾಡಿರುವುದಾಗಿ ದುರಗಮ್ಮ ಹೇಳಿದ್ದಾಳೆ ಎಂದು ತಿಳಿದುಬಂದಿದೆ.
ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
