ಅವನು ಶಾಸ್ತ್ರೋಕ್ತವಾಗಿ ಏಳೇಳು ಜನ್ಮಕ್ಕೂ ನೀನೇ ನನ್ನ ಹೆಂಡತಿ ಅಂತ ಹಸೆಮಣೆ ಏರಿದ್ದ. ಜೊತೆಗೆ 15 ವರ್ಷ ಸುಖ ಸಂಸಾರ ಕೂಡ ನಡೆಸಿದ್ದ. ಆದರೆ ಈಗ ಅವನ ಹೆಂಡತಿಗೆ ಅವನೇ ಮುಂದೆ ನಿಂತು ಮತ್ತೊಂದು ಮದುವೆ ಮಾಡಿಸಿದ್ದಾನೆ. ಅರೇ ಇದೇನಿದು ವಿಚಿತ್ರ ಅಂತೀರಾ ಈ ಸ್ಟೋರಿ ನೋಡಿ.
ಚಿಕ್ಕಬಳ್ಳಾಪುರ(ಜು.07): ಅವನು ಶಾಸ್ತ್ರೋಕ್ತವಾಗಿ ಏಳೇಳು ಜನ್ಮಕ್ಕೂ ನೀನೇ ನನ್ನ ಹೆಂಡತಿ ಅಂತ ಹಸೆಮಣೆ ಏರಿದ್ದ. ಜೊತೆಗೆ 15 ವರ್ಷ ಸುಖ ಸಂಸಾರ ಕೂಡ ನಡೆಸಿದ್ದ. ಆದರೆ ಈಗ ಅವನ ಹೆಂಡತಿಗೆ ಅವನೇ ಮುಂದೆ ನಿಂತು ಮತ್ತೊಂದು ಮದುವೆ ಮಾಡಿಸಿದ್ದಾನೆ. ಅರೇ ಇದೇನಿದು ವಿಚಿತ್ರ ಅಂತೀರಾ ಈ ಸ್ಟೋರಿ ನೋಡಿ.
ಅಶ್ವಿನಿ ಬಡಾವಣೆಯ ನಿವಾಸಿ ವಕೀಲೆ ರಚನಾಗೆ 15 ವರ್ಷಗಳ ಈಶ್ವರಗೌಡನ ಜೊತೆ ಮದುವೆಯಾಗಿತ್ತು. ಆದರೆ ಕೆಲವರ್ಷಗಳ ಬಳಿಕ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರದ ಕಾರಣ 2016ರಲ್ಲಿ ಇಬ್ಬರು ವಿಚ್ಛೇಧನ ಪಡೆದು ಬೇರೆ ಬೇರೆಯಾಗಿದ್ದರು. ಬಳಿಕ ರಚನಾ ಅವರದ್ದೇ ಒಡೆತನದ ಶಾಲೆಯಲ್ಲಿ ಸ್ಕೂಲ್ ವ್ಯಾನ್ ಚಾಲಕನಾಗಿದ್ದ ಮಂಜುನಾಥನ ಮೋಹಕ್ಕೆ ಬಿದ್ದು ಮದುವೆಯಾಗಿದ್ದಳು. ಈ ವೇಳೆ ಸ್ಥಳೀಯರು ಮಂಜುನಾಥನಿಗೆ ಗೂಸಾ ಕೊಟ್ಟಿದ್ದರು. ಬಳಿಕ ರಾಜೀ ಪಂಚಾಯ್ತಿಯಲ್ಲಿ ಸಮಸ್ಯೆ ಒಂದು ಹಂತಕ್ಕೆ ಬಗೆಹರಿದಿತ್ತು.
ಇನ್ನೂ ಮರು ಮದುವೆಯಾಗಿರುವ ರಚನಾ ಮೊದಲ ಗಂಡನಿಂದ ನಾನುವಿಚ್ಛೇದಿನ ಪಡೆದಿದ್ದು, ನನ್ನನ್ನು ಇಷ್ಟಪಡುವವನ್ನು ಮದುವೆಯಾಗಿದ್ದೇನೆ ಅಂತಿದ್ದಾಳೆ. ಹೀಗಾಗಿ ಮೊದಲನೇ ಗಂಡ ಈಶ್ವರಗೌಡ ಕೂಡ ಆಕೆ ಚೆನ್ನಾಗಿರಲಿ ಎಂದು ನಾನೇ ಮುಂದೆ ನಿಂತು ಮದುವೆ ಮಾಡಿಸಿದ್ದಾನೆ.
ಮದುವೆಗೆ ಸ್ನೇಹಿತರು.. ಪೋಷಕರು ಸಾಕ್ಷಿಯಾಗೋದನ್ನ ನೋಡಿದ್ದೇವೆ. ಆದರೆ ಪತಿಯೇ ಮುಂದೆ ನಿಂತು ಮದುವೆ ಮಾಡಿಸಿ ಹೆಂಡತಿ ಚೆನ್ನಾಗಿರಲಿ ಎಂದು ಹಾರೈಸಿರೋದು ವಿಶೇಷವಾಗಿದೆ.
