ಅನಸೂಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಗೃಹಿಣಿ ಕಳೆದ 15 ವರ್ಷಗಳ ಹಿಂದೆ ಕನಕಪುರದ ಸಿದ್ದರಾಜು ಜೊತೆಗೆ ಅನಸೂಯರ ಮದುವೆಯಾಗಿತ್ತು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಸಿದ್ದರಾಜು ಕಳೆದ 10 ವರ್ಷಗಳಿಂದ ಹೆಸರಘಟ್ಟದ ಮೀನಾಕ್ಷಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.

ಬೆಂಗಳೂರು(ಜ.07): ಪತಿಯ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡ ಪತ್ನಿ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಮಲಾನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಸೂಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಗೃಹಿಣಿ ಕಳೆದ 15 ವರ್ಷಗಳ ಹಿಂದೆ ಕನಕಪುರದ ಸಿದ್ದರಾಜು ಜೊತೆಗೆ ಅನಸೂಯರ ಮದುವೆಯಾಗಿತ್ತು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಸಿದ್ದರಾಜು ಕಳೆದ 10 ವರ್ಷಗಳಿಂದ ಹೆಸರಘಟ್ಟದ ಮೀನಾಕ್ಷಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.

ಈ ಹಿಂದೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದರೂ ಸಿದ್ದರಾಜು ಕೇಳಿರಲಿಲ್ಲ. ನಿನ್ನೆ ಹೆಸರಘಟ್ಟದ ಮೀನಾಕ್ಷಿ ಮನೆಯಲ್ಲಿ ಇಬ್ಬರೂ ಜೊತೆಗಿರುವ ದೃಶ್ಯವನ್ನ ಪತ್ನಿ ಅನುಸೂರು ಪ್ರತ್ಯಕ್ಷ ಕಂಡಿದ್ದಾಳೆ. ಇದರಿಂದ ಮನನೊಂದ ಅನಸೂಯ ಸಂಬಂಧಿಕರ ಜೊತೆ ಮೊಬೈಲ್'ನಲ್ಲಿ ಮಾತನಾಡಿ ವಿಷಸೇವಿಸಿದ್ದಾಳೆ.

ಕೂಡಲೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.