ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗಂಡನ ಗುಪ್ತಾಂಗವನ್ನೇ ಕತ್ತರಿಸಿದ ಪತ್ನಿ

Wife chops off Husbands Genitals flushes them down toilet over affair
Highlights

ಜಲಂದರ್’ನಲ್ಲಿ ಮಹಿಳೆಯೋರ್ವರು ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗುಪ್ತಾಂಗವನ್ನೇ ಕತ್ತರಿಸಿ ಶೌಚಾಲಯದಲ್ಲಿ ಹಾಕಿದ ಘಟನೆ ನಡೆದಿದೆ.

ಜಲಂದರ್ : ಜಲಂದರ್’ನಲ್ಲಿ ಮಹಿಳೆಯೋರ್ವರು ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗುಪ್ತಾಂಗವನ್ನೇ ಕತ್ತರಿಸಿ ಶೌಚಾಲಯದಲ್ಲಿ ಹಾಕಿದ ಘಟನೆ ನಡೆದಿದೆ. ಆಜಾದ್ ಸಿಂಗ್ ಎನ್ನುವ ವ್ಯಕ್ತಿ ಇದರಿಂದ ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಸುಕ್ವಂತ್ ಕೌರ್ ಎನ್ನುವ ಮಹಿಳೆ ತನ್ನ ಪತಿ ಮಲಗಿದ್ದ ವೇಳೆ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಜಲಂದರ್ ಅಸಿಸ್ಟಂಟ್ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ,

ಮೊದಲು ಪತಿಯ ತಲೆಗೆ ರಾಡ್’ನಿಂದ ಹೊಡೆದು ಆತ ಪ್ರಜ್ಞಾಹೀನನಾದ ವೇಳೆ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಶೌಚಾಲಯದಲ್ಲಿ ಅದನ್ನು ಬಿಸಾಡಿದ್ದಾಳೆ. ಬಳಿಕ ಹೆಚ್ಚು ರಕ್ತಸ್ರಾವವಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

loader