ಬೀದರ್[ಸೆ. 08] ಡಿ.ಕೆ ಶಿವಕುಮಾರ ಬಂಧನಕ್ಕ ಕಾಂಗ್ರೆಸ್ ಬಿಜೆಪಿ ಮೇಲೆ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ.   ಡಿಕೆ ಶಿವಕುಮಾರ್ ಶಿವಮೊಗ್ಗದಲ್ಲಿ ಚಹಾ ಮಾರುತಿದ್ದಂಥ ವ್ಯಕ್ತಿ ಎಂದು ಬಿಜೆಪಿ ಎಂಎಲ್ ಸಿ ರವಿಕುಮಾರ್ ಆರೋಪಿಸಿದ್ದಾರೆ.

ಇವರು ಒಮ್ಮಿಂದೋಮ್ಮಲೆ ಸಾವಿರ ಕೋಟಿ ರೂಪಾಯಿ ಒಡೆಯ ಹೇಗಾಗ್ತಾರೆ? ನಮಗೂ ಶ್ರೀಮಂತರಾಗಬೇಕೆಂಬ ಆಸೆ ಇದೆ. ಅವರು ಯಾವ ದಾರಿಯ ಮೂಲಕ ಶ್ರೀಮಂತರಾದ್ರೂ..?  ಎಂದು ಪ್ರಶ್ನೆ ಮಾಡಿದ್ದಾರೆ.

ಡಿಕೆಶಿ ಬೆನ್ನಲ್ಲೇ ಮತ್ತೆ ಇಬ್ಬರು ಮಾಜಿ ಸಚಿವರಿಗೆ ಜೈಲು ಭೀತಿ?

ಹೇಗೆ ಶ್ರೀಮಂತರಾದ್ರೂ ಎನ್ನುವುದನ್ನ ಇಡಿ ಮುಂದೆ ಹೇಳಲಿ..? ಅವರು ಸುಮ್ಮನೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.  ತನಿಖೆ ನಂತರ ಎಲ್ಲ  ಸತ್ಯ ಹೊರ ಬರಲಿದೆ  ಎಂದು ರವಿಕುಮಾರ್ ಹೇಳಿದರು.