ಸಚಿವ ಸಾ.ರಾ.ಮಹೇಶ್ ವಿರುದ್ಧ ಕೇಂದ್ರ ಸಚಿವೆ ಗರಂ
ನೆರೆ ಪೀಡಿತ ಜಿಲ್ಲೆಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದ್ದೇವೆ. ಪುನರ್ವಸತಿ ಕಾರ್ಯಗಳಿಗೆ 7 ಕೋಟಿ ರೂ. ಒದಗಿಸಲಾಗುವುದು. 3 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಂದ 7 ಕೋಟಿ ರೂ.,ಸಂಸದರ ನಿಧಿಯಿಂದ 1 ಕೋಟಿ ರೂ. ಹಾಗೂ ಸಿಎಸ್ ಆರ್ ನಿಧಿಯಿಂದಲೂ ಆರ್ಥಿಕ ವ್ಯವಸ್ಥೆ - ನಿರ್ಮಲಾ ಸೀತಾರಾಮನ್ ಭರವಸೆ
ಮಡಿಕೇರಿ[ಆ.24]: ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಪ್ರವಾಸಕ್ಕೆಂದು ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗು ಜಲ್ಲಾ ಉಸ್ತುವಾರಿ ಸಚಿವ ರಾ.ರಾ. ಮಹೇಶ್ ಅವರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಮಡಿಕೇರಿಯಲ್ಲಿ ನಡೆಯಿತು.
ನಿರ್ಮಲಾ ಸೀತಾರಾಮನ್ ಕೋಪಕ್ಕೆ ಕಾರಣ
ಕೇಂದ್ರ ಸಚಿವರ ಪರಿವೀಕ್ಷಣೆಗೆ ನಿಗದಿಯಾಗಿದ್ದು ಒಂದು ಸ್ಥಳ. ಆದರೆ ಸಚಿವ ಸಾ.ರಾ.ಮಹೇಶ್ ಅವರು ಕರೆದುಕೊಂಡು ಹೋಗಿದ್ದು ಮಾತ್ರ ಮತ್ತೊಂದು ಸ್ಥಳಕ್ಕೆ ನಿರ್ಮಲ ಸೀತಾರಾಮನ್ ಅವರನ್ನು ಕುಶಾಲನಗರಕ್ಕೆ ಕರೆದುಕೊಂಡು ಹೋಗಬೇಕಿತ್ತು. ಅದರ ಬದಲು ಮಕ್ಕಂದೂರಿಗೆ ಕರೆದೊಯ್ಯಲಾಗಿತ್ತು. ಇದಕ್ಕೆ ಸಚಿವರು ಗರಂ ಆಗಿ ಸಾ.ರಾ. ಮಹೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಿಸಿ ಕಚೇರಿಯ ಸಭೆ ವೇಳೆ ಅಧಿಕಾರಿಗಳ ವಿಚಾರಕ್ಕೂ ಸಚಿವರು ಕೋಪಗೊಂಡು, ಕೇಂದ್ರ ಸಚಿವರ ಸಭೆಯಲ್ಲಿ ಇಷ್ಟೊಂದು ಅಧಿಕಾರಿಗಳು ಏಕೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಸಚಿವ ಸಾ.ರಾ.ಮಹೇಶ್ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಕೊಡಗಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ
ಕೊಡಗಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವೆ, ನೆರೆ ಪೀಡಿತ ಜಿಲ್ಲೆಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದ್ದೇವೆ. ಪುನರ್ವಸತಿ ಕಾರ್ಯಗಳಿಗೆ 7 ಕೋಟಿ ರೂ. ಒದಗಿಸಲಾಗುವುದು. 3 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಂದ 7 ಕೋಟಿ ರೂ.,ಸಂಸದರ ನಿಧಿಯಿಂದ 1 ಕೋಟಿ ರೂ. ಹಾಗೂ ಸಿಎಸ್ ಆರ್ ನಿಧಿಯಿಂದಲೂ ಆರ್ಥಿಕ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಾಪ್ ಸಿಂಹಗೆ ಅಭಿನಂದನೆ
ಸಂಸದ ಪ್ರತಾಪ್ ಸಿಂಹ ಅವರು ಪ್ಲೀಸ್ ಬನ್ನಿ ಮೇಡಂ ಮನವಿ ಮಾಡಿಕೊಂಡ ಕಾರಣ ಜಿಲ್ಲೆಯ ನೆರೆ ಪರಿಸ್ಥಿತಿ ಬಗ್ಗೆ ವೀಕ್ಷಣೆ ಮಾಡಿದ್ದು, ನನ್ನ ಭೇಟಿಗೆ ಸಂಸದರೆ ಕಾರಣಕರ್ತರು ಎಂದು ಅಭಿನಂದಿಸಿದರು.