ಯುದ್ಧಕ್ಕೆ ಅಮೆರಿಕ ಮೀನಮೇಷ ಏಕೆ?

1) ಇರಾಕ್‌, ಲಿಬಿಯಾ, ಆಷ್ಘಾನಿಸ್ತಾನ, ಸಿರಿಯಾ ಮೇಲೆ ದಾಳಿ ನಡೆಸಿದ ಅಮೆರಿಕಕ್ಕೆ ಉತ್ತರ ಕೊರಿಯಾ ಸುಲಭ ತುತ್ತಾಗಿ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ದಾಳಿ ನಡೆಸಿದ ಯಾವುದೇ ರಾಷ್ಟ್ರದ ಬಳಿಯೂ ಅಣ್ವಸ್ತ್ರ ಇರಲಿಲ್ಲ. ಆದರೆ ಕೊರಿಯಾ ಬಳಿ ಇದೆ. ಅದೇ ತೊಡಕು.

2) ಒಂದು ವೇಳೆ ಅಮೆರಿಕ ಏನಾದರೂ ಸಾಂಪ್ರದಾಯಿಕ ಅಸ್ತ್ರ ಬಳಸಿ ಯುದ್ಧ ಸಾರಿದರೆ, ಕೊರಿಯಾ ಏಕಾಏಕಿ ಅಣ್ವಸ್ತ್ರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

3) ಅದು ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆ ಇಲ್ಲ​ವಾದರೂ ತನ್ನ ಶತ್ರುದೇಶಗಳಾದ ದಕ್ಷಿಣ ಕೊರಿಯಾ, ಜಪಾನ್‌ ಮೇಲೆ ಅಣ್ವಸ್ತ್ರ ಪ್ರಯೋಗಿಸುವ ಸಂಭವವಿದೆ.

4) ಅಮೆರಿಕ ಯುದ್ಧ ಸಾರಿದ ಬಳಿಕ ಚೀನಾ ತನ್ನ ಮಿತ್ರ ರಾಷ್ಟ್ರ ಉತ್ತರ ಕೊರಿಯಾದ ಬೆಂಬಲಕ್ಕೆ ನಿಲ್ಲುವ ಸಂಭವವಿದೆ.

5) ಅಮೆರಿಕ ಮೇಲಿನ ದ್ವೇಷದಿಂದಾಗಿ ರಷ್ಯಾ ಕೂಡ ಕಮ್ಯುನಿಸ್ಟ್‌ ದೇಶವಾದ ಉ.ಕೊರಿಯಾ ನೆರವಿಗೆ ಧಾವಿಸುವ ಸಾಧ್ಯತೆ ಇದೆ. ಹೀಗಾಗಿ ಈ ಯುದ್ಧ ಅಮೆರಿಕಕ್ಕೆ ಕಬ್ಬಿಣದ ಕಡಲೆಯಾಗಿದೆ.