ಇಲ್ಲಿನವರು ಮೃತದೇಹವನ್ನು ಹೋಟಲ್'ನಲ್ಲಿಡುವ ಕಾರಣ ಇಂಟರೆಸ್ಟಿಂಗ್

news | Friday, May 11th, 2018
Chethan Kumar
Highlights

ಹೋಟೆಲ್'ನಲ್ಲಿ ಒಂದಷ್ಟು ಗಂಟೆ ಅಥವಾ ಒಂದು ದಿನಗಳ ಕಾಲ ಇಟ್ಟು ಸ್ನೇಹಿತರ ಹಾಗೂ ಬಂಧುಗಳ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ಸ್ಥಳಾವಕಾಶ ಸಿಕ್ಕ ನಂತರ  ಶವಸಂಸ್ಕಾರ ನಡೆಸಲಾಗುತ್ತದೆ. ಮೃತದೇಹಗಳನ್ನು ಇಡುವುದಕ್ಕೆ ಕಾರಣ ಇಷ್ಟೆ. ಇಲ್ಲಿನ ಪ್ರದೇಶದಲ್ಲಿ  ಸ್ಮಶಾನಗಳ ಕೊರತೆಯಿದೆ. ಹಾಲಿಯಿರುವ ಸ್ಮಶಾನಗಳು ಸಂಪೂರ್ಣ ಭರ್ತಿಯಾಗಿರುತ್ತವೆ.

ಟೋಕಿಯೋ(ಮೇ.11): ಸಾಮಾನ್ಯವಾಗಿ ಯಾರಾದರೂ ಮೃತಪಟ್ಟ ನಂತರ ಸಂಬಂಧಿಕರು ಹಾಗೂ ಹತ್ತಿರದವರು ಬರುವ ತನಕ ಒಂದಷ್ಟು ಗಂಟೆಗಳ ಕಾಲ ಇಟ್ಟುಕೊಳ್ಳುವುದು ಸಂಪ್ರದಾಯ. ಮಕ್ಕಳು ವಿದೇಶದಲ್ಲಿದ್ದರೆ  ಒಂದೆರಡು ದಿನ ಶೀತ ಪೆಟ್ಟಿಗೆಯ ಮೂಲಕ ಇಟ್ಟುಕೊಳ್ಳುವುದು ರೂಢಿ. ಆದರೆ ಜಪಾನಿನ ಈ ಪ್ರತಿಷ್ಠಿತ ಹೋಟೆಲ್'ನಲ್ಲಿ ಅಲ್ಲಿನ ಜನರು ಮೃತದೇಹವನ್ನು ಇಡುತ್ತಾರೆ.
ಇದೇನಪ್ಪ ಉಪಹಾರ ಸೇವಿಸುವ ಹಾಗೂ ಉಳಿದುಕೊಳ್ಳುವ ಹೋಟೆಲ್'ಗಳಲ್ಲಿ  ಮೃತದೇಹಗಳನ್ನು ಇಡುತ್ತಾರೆ ಎಂದುಕೊಳ್ಳಬೇಡಿ. ಇದಕ್ಕೆ ಇಂಟರೆಸ್ಟಿಂಗ್ ಕಾರಣವಿದೆ. ಜಪಾನ್ ಸಂಪ್ರದಾಯಗಳು ಕೂಡ ಭಾರತೀಯ ಸಂಸ್ಕೃತಿಯನ್ನು ಒಂದಿಷ್ಟು ಬೆಸೆದುಕೊಂಡಿದೆ. ಹೊಸಾಕೊ ಪ್ರದೇಶದಲ್ಲಿರುವ ಇಟಾಯಿ ಒಟಾರು ಎಂಬ ಹೆಸರಿನ ಹೋಟೆಲ್'ನಲ್ಲಿ ಮೃತದೇಹಗಳನ್ನು ಇಡಲಾಗುತ್ತದೆ. 
ಹೋಟೆಲ್'ನಲ್ಲಿ ಒಂದಷ್ಟು ಗಂಟೆ ಅಥವಾ ಒಂದು ದಿನಗಳ ಕಾಲ ಇಟ್ಟು ಸ್ನೇಹಿತರ ಹಾಗೂ ಬಂಧುಗಳ ಅಂತಿಮ ವಿಧಿವಿಧಾನಗಳನ್ನು ಮುಗಿಸಿ ಸ್ಥಳಾವಕಾಶ ಸಿಕ್ಕ ನಂತರ  ಶವಸಂಸ್ಕಾರ ನಡೆಸಲಾಗುತ್ತದೆ. ಮೃತದೇಹಗಳನ್ನು ಇಡುವುದಕ್ಕೆ ಕಾರಣ ಇಷ್ಟೆ. ಇಲ್ಲಿನ ಪ್ರದೇಶದಲ್ಲಿ ಸ್ಮಶಾನಗಳ ಕೊರತೆಯಿದೆ. ಹಾಲಿಯಿರುವ ಸ್ಮಶಾನಗಳು ಸಂಪೂರ್ಣ ಭರ್ತಿಯಾಗಿರುತ್ತವೆ. ಈ ಹಿನ್ನಲೆಯಲ್ಲಿ ಸ್ಥಳಾವಕಾಶ ದೊರೆಯುವ ತನಕ ಇಟಾಯಿ ಒಟಾರು ಹೋಟೆಲ್'ನಲ್ಲಿ ಮೃತದೇಹಗಳನ್ನು ಇಡಲಾಗುತ್ತದೆ. ಉತ್ತಮ ಸೌಲಭ್ಯ ಹೊಂದಿರುವ ಈ ಹೋಟೆಲ್ ಅತ್ಯಂತ ಶುಚಿಯಾಗಿದೆ. ಎಲ್ಲ ವರ್ಗದ ಜನರಿಗೆ ಅವರ ಆರ್ಥಿಕ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ನೀಡುವ ಕಾರಣ ಮೃತದೇಹಗಳನ್ನು ಇಡಲು ಬಳಸುತ್ತಾರೆ.

ಕನ್ನಡ ಪ್ರಭಕ್ಕಾಗಿ  http://kpepaper.asianetnews.com ಕ್ಲಿಕ್ ಮಾಡಿ

Comments 0
Add Comment

    Related Posts