ಲೋಕಸಭೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಸಿದ್ದು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 10:25 AM IST
Why Siddaramaiah not Contesting Loksabha - Selected Part of july 24th Prashant natu's column
Highlights

  • ನನ್ನದೇನಿದ್ದರೂ ರಾಜ್ಯ ರಾಜಕೀಯ ಎಂದು ಸ್ಪಷ್ಟ ಶಬ್ದಗಳಲ್ಲಿ ಹೈಕಮಾಂಡ್'ಗೆ ಹೇಳಿದ್ದರಾಂತೆ
  • ಮುಂದಿನ ಲೋಕಸಭೆಯಲ್ಲಿ ಕಾಂಗ್ರೆಸಿಗೆ ಹೆಚ್ಚು ಸೀಟು ಗೆಲ್ಲಿಸಿಕೊಡಲು ಪರಿಶ್ರಮ

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಗೆ ತಂದ ನಂತರ ಕಾಂಗ್ರೆಸ್ ಹೈಕಮಾಂಡ್‌ನ ಮನಸ್ಸಿನಲ್ಲಿ ಅವರು ಲೋಕಸಭೆಗೆ ಸ್ಪರ್ಧಿಸಬೇಕು ಎಂದಿತ್ತು. ಆದರೆ ಸಿದ್ದರಾಮಯ್ಯ ನಾನು ಇನ್ನು ಚುನಾವಣೆಗೆ ಸ್ಪರ್ಧಿಸೋದಿಲ್ಲ, ನನ್ನದೇನಿದ್ದರೂ ರಾಜ್ಯ ರಾಜಕೀಯ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದರಾಂತೆ. ಸಿದ್ದು ಲೋಕಸಭೆಗೆ ಸ್ಪರ್ಧಿಸಿದರೆ ಹಿಂದುಳಿದ ವರ್ಗದ ಮತಗಳು ಬಿಜೆಪಿಯತ್ತ ಚದುರಿ ಹೋಗದಂತೆ ತಡೆಯಬಹುದು ಎಂಬ ಚಿಂತನೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ. 

ಆದರೆ ಈಗಾಗಲೇ ನನ್ನದು ಕೊನೆಯ ಚುನಾವಣೆ ಎಂದು ಹೇಳಿಬಿಟ್ಟಿದ್ದೇನೆ, ಪದೇ ಪದೇ ನಿಲ್ಲುತ್ತಾ ಹೋದರೆ ಜನರಿಗೆ ಸುಳ್ಳು ಹೇಳಿದ ಹಾಗೆ ಆಗುತ್ತದೆ ಎಂದು ಸಿದ್ದು ದಿಲ್ಲಿ ನಾಯಕರ ಎದುರು ಹೇಳಿ ಬಂದಿದ್ದಾರೆ. ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಜೊತೆಗಿನ ಸಿದ್ದು ಭೇಟಿಯಲ್ಲೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರಸ್ತಾಪ ಆಗಿದೆ. ಆದರೆ, ನನಗೆ ಇಷ್ಟವಿಲ್ಲ. ನಾನು 28 ಕ್ಷೇತ್ರಗಳಲ್ಲಿ ಓಡಾಡಿ ಪ್ರಚಾರ ಮಾಡಿ ಅತಿ ಹೆಚ್ಚು ಸೀಟು ಗೆಲ್ಲಿಸಲು ಪರಿಶ್ರಮ ಹಾಕುತ್ತೇನೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.

(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)

loader