ಹರ್ಯಾಣ (ಸೆ.14): ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿಯವರ ಮೇಲೆ ಹಾಕಿರುವ ಎಫ್ ಐಆರ್ ತಿರಸ್ಕೃತಗೊಳಿಸದಿರಲು ಕಾರಣ ಕೊಡಿ ಎಂದು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಕೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸುವಂತೆ ಹರ್ಯಾಣ ಪೋಲಿಸರಿಗೆ ನ್ಯಾಯಾಲಯ ಕೇಳಿದೆ.

ಮುನಿಶ್ರೀ ತರುಣ್ ಸಾಗರ್ ಹರ್ಯಾಣ ವಿಧಾನಸಭೆಯಲ್ಲಿ ಮಾಡಿರುವ ಭಾಷಣದ ಬಗ್ಗೆ ವಿವಾದಾತ್ಮಕವಾಗಿ ಪ್ರತಿಕ್ರಿಯೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ,

ಇವರ ಬಂಧನದ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನೀವು ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ಆದೇಶ ಪಡೆದುಕೊಳ್ಳಿ ಎಂದು ಸುಪ್ರೀಂ ದದ್ಲಾನಿಗೆ ಸಲಹೆ ನೀಡಿದೆ.