Asianet Suvarna News Asianet Suvarna News

ಕೋರ್ಟ್ ಎಚ್ಚರಿಕೆ ಕೊಟ್ರೂ ಎಚ್ಚೆತ್ತುಕೊಳ್ತಿಲ್ಲ ಬಿಡಿಎ

ಬಿಡಿಎ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಲೋಕಾಯುಕ್ತ ಹಾಗೂ ಹಸಿರು ನ್ಯಾಯಾಧೀಕರಣ ಅದೆಷ್ಟೇ ಚಾಟಿ ಬೀಸಿದ್ರೂ ಬುದ್ದಿ ಬರುತ್ತಿಲ್ಲ. ಬೆಂಗಳೂರಿನ ಕೆರೆಗಳ ಬಗ್ಗೆ ಅದೇ ನಿರ್ಲಕ್ಷ್ಯ, ಬೇಜವಾಬ್ಧಾರಿ ಮುಂದುವರಿಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ  ಲೋಕಾಯುಕ್ತದ ನಿರ್ದೇಶನ ಮೇರೆಗೆ ನಡೆಯಬೇಕಿದ್ದ ಚಿಕ್ಕಬಾಣಾವರ ಕೆರೆಯ ಸರ್ವೆಗೆ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬಂದಿರಲಿಲ್ಲ.

ಬಿಡಿಎ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಲೋಕಾಯುಕ್ತ ಹಾಗೂ ಹಸಿರು ನ್ಯಾಯಾಧೀಕರಣ ಅದೆಷ್ಟೇ ಚಾಟಿ ಬೀಸಿದ್ರೂ ಬುದ್ದಿ ಬರುತ್ತಿಲ್ಲ. ಬೆಂಗಳೂರಿನ ಕೆರೆಗಳ ಬಗ್ಗೆ ಅದೇ ನಿರ್ಲಕ್ಷ್ಯ, ಬೇಜವಾಬ್ಧಾರಿ ಮುಂದುವರಿಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ  ಲೋಕಾಯುಕ್ತದ ನಿರ್ದೇಶನ ಮೇರೆಗೆ ನಡೆಯಬೇಕಿದ್ದ ಚಿಕ್ಕಬಾಣಾವರ ಕೆರೆಯ ಸರ್ವೆಗೆ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬಂದಿರಲಿಲ್ಲ. ಆದ್ದರಿಂದ ದೂರುದಾರರಾದ
ನಮ್ಮ ಬೆಂಗಳೂರು ಪ್ರತಿಷ್ಠಾನ, ಯುನೈಟೆಡ್ ಬೆಂಗಳೂರು ಸಂಸ್ಥೆಗಳು ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳೊಂದಿಗೆ ಕೆರೆಯ ಪರಿಶೀಲನೆ ನಡೆಸಿದರು. 105 ಎಕರೆ ವಿಸ್ತಾರದ ಕೆರೆಯಲ್ಲಿ ಒಂದು ಕಡೆ ಕಸ, ಪ್ಲಾಸ್ಟಿಕ್ ತುಂಬಿದ್ದರೆ ಇನ್ನೊಂದು ಕಡೆ ಒತ್ತುವರಿಯಾಗಿರೋದು ಅಧಿಕಾರಿಗಳ ನಿರ್ಲಕ್ಯಕ್ಕೆ ಸಾಕ್ಷಿಯಾಗಿದೆ.