ನೋಟ್ ಬ್ಯಾನ್'ನಿಂದ ಜನರಿಗೆ ಆಗುತ್ತಿರುವ ಸಂಕಷ್ಟ ತೊಂದರೆ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದೇ ವಿಚಾರಕ್ಕೆ ಸಂಸತ್ ಚಳಿಗಾಲದ ಅಧಿವೇಶನವೂ ಬಲಿಯಾಗುತ್ತಿದೆ ಎಂದು ಮಾಜಿಪ್ರಧಾನಿ ದೇವೇಗೌಡ ಮೋದಿ ವಿರುದ್ಧ ತಿರುಗಿಬಿದ್ದಿದ್ದಾರೆ. ದೇಶದ ತುಂಬೆಲ್ಲ ನೋಟು ರದ್ದತಿ ಬಗ್ಗೆ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತ್ರ ಮಾತನಾಡುವುದಿಲ್ಲ, ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಏಕೆ ಅಂತಾ ಪ್ರಶ್ನಿಸಿದರು. ನಾನು ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಯನ್ನು ಹೇಳಲು ಬಂದಿದ್ದೇನೆ, ಆದರೆ ಸದನವೇ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನವದೆಹಲಿ(ನ.22): ನೋಟ್ ಬ್ಯಾನ್'ನಿಂದ ಜನರಿಗೆ ಆಗುತ್ತಿರುವ ಸಂಕಷ್ಟ ತೊಂದರೆ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದೇ ವಿಚಾರಕ್ಕೆ ಸಂಸತ್ ಚಳಿಗಾಲದ ಅಧಿವೇಶನವೂ ಬಲಿಯಾಗುತ್ತಿದೆ ಎಂದು ಮಾಜಿಪ್ರಧಾನಿ ದೇವೇಗೌಡ ಮೋದಿ ವಿರುದ್ಧ ತಿರುಗಿಬಿದ್ದಿದ್ದಾರೆ.
ದೇಶದ ತುಂಬೆಲ್ಲ ನೋಟು ರದ್ದತಿ ಬಗ್ಗೆ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತ್ರ ಮಾತನಾಡುವುದಿಲ್ಲ, ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಏಕೆ ಅಂತಾ ಪ್ರಶ್ನಿಸಿದರು. ನಾನು ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಯನ್ನು ಹೇಳಲು ಬಂದಿದ್ದೇನೆ, ಆದರೆ ಸದನವೇ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜನ ಖರ್ಗೆ ಕೂಡ ಮೋದಿ ವಿರುದ್ದ ಕಿಡಿಕಾರಿದ್ದಾರೆ. ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಮತದಾನವಿಲ್ಲದೆ ಚರ್ಚೆಗೆ ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
