ಕರ್ನಾಟಕ ಸರ್ಕಾರವೂ ಸೇರಿದಂತೆ ಯಾವುದೇ ರಾಜ್ಯ ಸರ್ಕಾರಗಳು ದೇವಾಲಯಗಳನ್ನು ವಶಪಡಿಸಿಕೊಳ್ಳುವುದರ ವಿರುದ್ಧ ಉಡುಪಿ ಧರ್ಮ ಸಂಸದ್ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಈ ಪ್ರವೃತ್ತಿಯನ್ನು ತಕ್ಷಣ ನಿಲ್ಲಿಸದಿದ್ದಲ್ಲಿ ತಿರುಗಿ ಬೀಳುವ ಉಗ್ರ ಎಚ್ಚರಿಕೆಯನ್ನು ನೀಡಿದೆ. ಇದೇ ವೇಳೆ ಮಸೀದಿ ಹಾಗೂ ಚರ್ಚುಗಳನ್ನು ಸ್ವಾಧೀನಪಡಿಸಿಕೊಳ್ಳದ ಸರ್ಕಾರಕ್ಕೆ ಕೇವಲ ಮಂದಿರಗಳನ್ನು ಮಾತ್ರ ಸ್ವಾಧೀನಪಡಿಸುವ ಆಸಕ್ತಿ ಏಕೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.

ಉಡುಪಿ (.26): ಕರ್ನಾಟಕ ಸರ್ಕಾರವೂ ಸೇರಿದಂತೆ ಯಾವುದೇ ರಾಜ್ಯ ಸರ್ಕಾರಗಳು ದೇವಾಲಯಗಳನ್ನು ವಶಪಡಿಸಿಕೊಳ್ಳುವುದರ ವಿರುದ್ಧ ಉಡುಪಿ ಧರ್ಮ ಸಂಸದ್ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಈ ಪ್ರವೃತ್ತಿಯನ್ನು ತಕ್ಷಣ ನಿಲ್ಲಿಸದಿದ್ದಲ್ಲಿ ತಿರುಗಿ ಬೀಳುವ ಉಗ್ರ ಎಚ್ಚರಿಕೆಯನ್ನು ನೀಡಿದೆ. ಇದೇ ವೇಳೆ ಮಸೀದಿ ಹಾಗೂ ಚರ್ಚುಗಳನ್ನು ಸ್ವಾಧೀನಪಡಿಸಿಕೊಳ್ಳದ ಸರ್ಕಾರಕ್ಕೆ ಕೇವಲ ಮಂದಿರಗಳನ್ನು ಮಾತ್ರ ಸ್ವಾಧೀನಪಡಿಸುವ ಆಸಕ್ತಿ ಏಕೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.

ಸರ್ಕಾರಗಳು ಹಿಂದೂ ದೇವಾಲಯಗಳನ್ನು ಸ್ವಾಧೀನಪಡಿಸುವುದನ್ನು ತಕ್ಷಣ ನಿಲ್ಲಿಸಬೇಕು. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ದೇವಾಲಯಗಳನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು. ಇಲ್ಲದಿದ್ದಲ್ಲಿ ದೇಶದ ಸಂತರೆಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಧರ್ಮ ಸಂಸದ್‌ನ 2 ನೇ ದಿನ ಆಗ್ರಹಪೂರ್ವಕ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಹಿಂದೂ ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲು ಉಡುಪಿಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಹಿಂದು ಧರ್ಮ ಸಂಸದ್‌ನಲ್ಲಿ ಮೊದಲ ದಿನ ರಾಮಮಂದಿರದ ನಿರ್ಣಯವಾದರೇ ಎರಡನೇ ದಿನ ಮಂದಿರಗಳ ಸರ್ಕಾರೀಕರಣದ ವಿರುದ್ಧ ನಿರ್ಣಯವನ್ನು ಕೈಗೊಳ್ಳಲಾಯಿತು.

ಮಸೀದಿ, ಚರ್ಚ್ ಸ್ವಾಧೀನವೇಕಿಲ್ಲ?: ಉತ್ತರ ಕನ್ನಡ ಜಿಲ್ಲೆಯ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿ ಅವರು ವಿಷಯವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಥ ತೀವ್ರ ವಾಗ್ದಾಳಿ ನಡೆಸಿದರು. ಮುಸ್ಲೀಮರ ಮಸೀದಿ ಮತ್ತು ಕ್ರೈಸ್ತರ ಚರ್ಚುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಆದರೆ ಹಿಂದುಗಳ ದೇವಾಲಯಗಳನ್ನು ಸ್ವಾಧೀನಪಡಿಸುವ ಆಸಕ್ತಿ ಏಕೆ? ಮಸೀದಿ, ಚರ್ಚುಗಳ ಉಸ್ತುವಾರಿಗೆ ಸರ್ಕಾರೇತರ ಸ್ವಾಯತ್ತ ಮಂಡಳಿ ಇವೆ. ಆದರೆ ದೇವಾಲಯಗಳಿಗೆ ಏಕಿಲ್ಲ ಎಂದು ಉಗ್ರವಾಗಿ ಪ್ರಶ್ನಿಸಿದರು. ದೇವಾಲಯಗಳ ಸ್ವಾಧೀನಕರಣವನ್ನು ನಿಲ್ಲಿಸಬೇಕು. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ದೇವಾಲಯಗಳನ್ನು ಮರಳಿಸಬೇಕು. ಈ ಬಗ್ಗೆ ಸರ್ಕಾರಗಳು ಸಾಧು ಸಂಸತರ ಜೊತೆ ಚರ್ಚಿಸಿ ಸೂಕ್ತ ಕಾನೂನು ರಚಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲು ನಿರ್ಧರಿಸಲಾಯಿತು. ಇದಕ್ಕೆ ಸರ್ಕಾರ ಒಪ್ಪದಿದ್ದಲ್ಲಿ ಹಿಂದೂ ಸಮಾಜವು ಸಂತರ ನೇತೃತ್ವದಲ್ಲಿ ದೇಶಾದ್ಯಂತ ಬೀಗಿಗಿಳಿದು ಹೋರಾಟ ನಡೆಸಬೇಕು ಎಂದೂ ನಿರ್ಣಯ ಪ್ರಕಟಿಸಲಾಯಿತು. ಇದನ್ನು ನೆರೆದಿದ್ದ ಸಾಧು ಸಂತರು ಕರತಾಡನ ಮತ್ತು ಜೈಶ್ರೀರಾಮ್ ಎಂಬ ಘೋಷದೊಂದಿಗೆ ಅನುಮೋದಿಸಿದರು.