ಪತ್ನಿ ಕಿರುಕುಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ : ಶಮಿ ದುಬೈ'ಗೆ ಹೋಗಿದ್ದೇಕೆ ?

First Published 12, Mar 2018, 6:37 PM IST
Why did Mohammed Shami go to Dubai Kolkata Police ask BCCI
Highlights

ಶಮಿ ಪತ್ನಿ ದೂರಿನ ಹಿನ್ನಲೆಯಲ್ಲಿ ಕೋಲ್ಕತ್ತಾ ಪೊಲೀಸರು ಐಪಿಸಿ ಸೆಕ್ಷನ್'ನಡಿ ಹಲವು ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಭಾರತದ ಖ್ಯಾತ ಬೌಲರ್ ಆಗಿರುವ ಮೊಹಮದ್ ಶಮಿ ಜನವರಿ 5ರಿಂದ 27ರವರೆಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರು.

ಮುಂಬೈ(ಮಾ.12): ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಪತ್ನಿ ಕಿರುಕುಳ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ.

ಕೋಲ್ಕತ್ತಾ ಪೊಲೀಸರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಶಮಿ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಶಮಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭಾರತಕ್ಕೆ ಆಗಮಿಸುವ ಸಂದರ್ಭದಲ್ಲಿ ದುಬೈ'ಗೆ ಏಕೆ ಭೇಟಿ ನೀಡಿದ್ದರು ಎಂದು ಪ್ರಶ್ನಿಸಿದ್ದಾರೆ.

ಶಮಿ ಪತ್ನಿ ದೂರಿನ ಹಿನ್ನಲೆಯಲ್ಲಿ ಕೋಲ್ಕತ್ತಾ ಪೊಲೀಸರು ಐಪಿಸಿ ಸೆಕ್ಷನ್'ನಡಿ ಹಲವು ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಭಾರತದ ಖ್ಯಾತ ಬೌಲರ್ ಆಗಿರುವ ಮೊಹಮದ್ ಶಮಿ ಜನವರಿ 5ರಿಂದ 27ರವರೆಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರು.

ಶಮಿ ಪತ್ನಿ ತಮ್ಮ ದೂರಿನಲ್ಲಿ ತಮ್ಮ ಪತಿ ಇತ್ತೀಚಿಗೆ ದುಬೈ'ಗೆ ಭೇಟಿ ನೀಡಿ ಪಾಕಿಸ್ತಾನದ ಮಹಿಳೆಯೊಬ್ಬರನ್ನು ಭೇಟಿಯಾಗಿದ್ದರು. ಇದಕ್ಕಾಗಿ ತಮ್ಮ ಜೊತಗಿನ ಪ್ರವಾಸವನ್ನು ರದ್ದುಗೊಳಿಸಿದ್ದರು. ಶಮಿ ಮ್ಯಾಚ್ ಫಿಕ್ಸಿಂಗ್'ನಲ್ಲಿ ಭಾಗಿಯಾಗಿದ್ದು ಪಾಕಿಸ್ತಾನ ಮಹಿಳೆಯೊಬ್ಬಳಿಂದ ಹಣ ಪಡೆದುಕೊಂಡಿದ್ದರು' ಎಂದು ದೂರು ನೀಡಿದ್ದರು. ಕಿರುಕುಳ, ಹಲ್ಲೆ, ತಮ್ಮನಿಂದ ಅತ್ಯಾಚಾರ ಸೇರಿದಂತೆ ಹಲವು ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಒಂದು ವೇಳೆ ಇವೆಲ್ಲ ನಿಜವಾದರೆ  10 ವರ್ಷಗಳ ಕಾಲ ಜೈಲು ಶಿಕ್ಷೆಯಾಗುತ್ತದೆ.

loader