ತನ್ನ 2ನೇ ಹೆಂಡತಿಯನ್ನು ಸುನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಆತನನ್ನು ಕೊಲೆ ಮಾಡಬೇಕೆಂದು ರವಿ ಬೆಳಗೆರೆ ಅವರು ಹಣ ಕೊಟ್ಟಿದ್ದರು ಕೊಲೆಯ ಕಾರಣವನ್ನು ತಿಳಿಸಿದ್ದಾನೆ.
ಬೆಂಗಳೂರು(ಡಿ.08): ಸಿಸಿಬಿ ಪೊಲೀಸರು ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಬಂಧಿಸಿದ್ದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರವಾಗಿ ಆದರೆ ಆತ ಬಾಯ್ಬಿಟ್ಟಿದ್ದು ಸ್ಫೋಟಕ ಸುದ್ದಿ.
ಪೊಲೀಸರು ವಿಚಾರಣೆ ನಡೆಸಿದಾಗ ನಾನು ಬೆಂಗಳೂರಿಗೆ ಬಂದಿದ್ದು ಗೌರಿ ಲಂಕೆಶರನ್ನು ಹತ್ಯೆ ಮಾಡಲು ಅಲ್ಲ. ಹಾಯ್ ಬೆಂಗಳೂರು ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರು ತಮ್ಮ ಮಾಜಿ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ನನಗೆ 30 ಲಕ್ಷ ರೂ. ಸುಪಾರಿ ಕೊಟ್ಟಿದ್ದರು. ಆ ಕಾರಣದಿಂದ ಹೆಗ್ಗರವಳ್ಳಿಯನ್ನು ಕೊಲ್ಲಲು ಬಂದಿದ್ದೆ ಎಂದು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.
ಸುನೀಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡಬೇಕೆಂದು ರವಿ ಬೆಳಗೆರೆ ಅವರು ಹಣ ಕೊಟ್ಟಿದ್ದರು ಎಂದು ಕೊಲೆಯ ಕಾರಣವನ್ನು ತಿಳಿಸಿದ್ದಾನೆ. ಸುನೀಲ್ ಹೆಗ್ಗರವಳ್ಳಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುಮಾರು 17 ವರ್ಷಗಳ ಕಾಲ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದರು. ಸದ್ಯ ರವಿ ಬೆಳಗೆರೆಯನ್ನು ಪದ್ಮನಾಭ ನಗರ ಮನೆಯಿಂದ ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
