Asianet Suvarna News Asianet Suvarna News

ಜೆಡಿಎಸ್ ನ ಒಂದು ಟಿಕೆಟ್ ಯಾರಿಗೆ..?

ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರದಲ್ಲಿ ತನಗೆ ಲಭಿಸುವ ಒಂದು ಸ್ಥಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

Who Will Get Ticket From JDS For MLC Election
Author
Bengaluru, First Published Sep 20, 2018, 10:11 AM IST | Last Updated Sep 20, 2018, 10:11 AM IST

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರದಲ್ಲಿ ತನಗೆ ಲಭಿಸುವ ಒಂದು ಸ್ಥಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ರೇಸ್‌ನಲ್ಲಿದ್ದು, ‘ದಳ’ಪತಿಗಳ ಆಶೀರ್ವಾದ ಯಾರಿಗೆ ಲಭಿಸಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಜಾತಿ, ಪ್ರಭಾವ ಪ್ರಾಬಲ್ಯದ ಮೇಲೆ ಅಭ್ಯ ರ್ಥಿಗಳಿಗೆ ಟಿಕೆಟ್ ದೊರಕಲಿದೆ. ಜೆಡಿಎಸ್ ವರಿಷ್ಠರು ತಮ್ಮ ‘ಮಾನದಂಡ’ಗಳಿ ಗನುಸಾರವಾಗಿ ಟಿಕೆಟ್ ಹಂಚಿಕೆ ಮಾಡಲಿದ್ದಾರೆ. ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಲಿದ್ದು, ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 

ಪಕ್ಷದ ಮುಖಂಡ ಅಮರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಮಾಜಿ ಶಾಸಕರಾದ ಎನ್.ಎಚ್. ಕೋನರೆಡ್ಡಿ, ಮಧು ಬಂಗಾರಪ್ಪ, ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಇತರರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಪೈಕಿ ಅಮರನಾಥ್  ಮತ್ತು ರಮೇಶ್ ಬಾಬು ಹೆಸರು ಮುಂಚೂಣಿಯಲ್ಲಿದ್ದು, ಈ ಪೈಕಿ ಒಬ್ಬರನ್ನು ಜೆಡಿಎಸ್ ವರಿಷ್ಠರು ಅಂತಿಮಗೊಳಿಸುವ ಸಾಧ್ಯತೆ ಎಂದು ಮೂಲಗಳು ಹೇಳಿವೆ. ವಿಧಾನಪರಿಷತ್‌ನ ಖಾಲಿ ಇರುವ ಮೂರು ಸ್ಥಾನಗಳಿಗೆ ವಿಧಾನಸಭೆಯ ಸದಸ್ಯರು ಮೂವರು ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. 

ಈಗಾಗಲೇ ನಾಮಪತ್ರ  ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆ.22 ರಂದು ನಾಮಪತ್ರಕ್ಕೆ ಕೊನೆಯ ದಿನವಾಗಿದೆ. ಸೆ.26 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಭೆ ಸೇರಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವ ಎಚ್.ಡಿ.ರೇವಣ್ಣ ಸೇ ಇತರೆ ಪ್ರಮುಖರು ಸಭೆ ನಡೆಸಿ ಚರ್ಚಿಸಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ರಮೇಶ್ ಬಾಬು ಅವರು ಈಗಾಗಲೇ ಪರಿಷತ್ ಸದಸ್ಯರಾಗಿದ್ದು, ಸಮರ್ಥರಿದ್ದಾರೆ. 

ಈ ಹಿಂದೆ ಸದನದೊಳಗೆ ಮತ್ತು ಹೊರಗೆ ಪಕ್ಷವನ್ನು ಸಮರ್ಥಿಸಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ರಮೇಶ್ ಬಾಬು ಪರ ಒಲವು ವ್ಯಕ್ತಪಡಿ ಸಿದ್ದಾರೆ. ಆದರೆ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಅಮರನಾಥ್ ಪರ ಒಲವಿದೆ ಎನ್ನಲಾಗಿದೆ. 

Latest Videos
Follow Us:
Download App:
  • android
  • ios