ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಡಾ.ಯತೀಂದ್ರ,  ಟಿ.ನರಸೀಪುರದಲ್ಲಿ ಸುನೀಲ್ ಬೋಸ್ ಗೆ ಕ್ಷೇತ್ರ ಬಿಟ್ಟುಕೊಡುವ ವಿಚಾರವಾಗಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ, ವಿಧಿಬರಹ ಹೇಗಿದೆಯೋ ಹಾಗೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಡಾ.ಯತೀಂದ್ರ, ಟಿ.ನರಸೀಪುರದಲ್ಲಿ ಸುನೀಲ್ ಬೋಸ್ ಗೆ ಕ್ಷೇತ್ರ ಬಿಟ್ಟುಕೊಡುವ ವಿಚಾರವಾಗಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ, ವಿಧಿಬರಹ ಹೇಗಿದೆಯೋ ಹಾಗೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಹಾದೇವಪ್ಪ, ಕ್ಷೇತ್ರ ಬಿಟ್ಟುಕೊಡೋದಿಕ್ಕೆ ನಾವ್ಯಾರು? ಯಾರು ಪಕ್ಷದಲ್ಲಿ ನಾಯಕತ್ವ ರೂಢಿಸಿಕೊಳ್ತಾರೋ, ಪಕ್ಷ ಅವರನ್ನು ಗುರುತಿಸುತ್ತದೆ. ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.

ಕಳೆದ ಎಂಟ್ಹತ್ತು ವರ್ಷಗಳಿಂದ ಸುನೀಲ್ ಬೋಸ್ ಕಾರ್ಯಕರ್ತರ ಜೊತೆ ಪಕ್ಷದ ಕೆಲಸ ಮಾಡ್ತಿದ್ದಾರೆ, ಅದೇ ಥರ ಡಾ.ಯತೀಂದ್ರ ಕೂಡಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯಕರ್ತರ ಜೊತೆ ಕೆಲಸ ಮಾಡ್ತಿದ್ದಾರೆ, ಇವರಿಬ್ಬರ ಕಾರ್ಯವೈಖರಿ, ಜನಕಾಳಜಿ, ಪಕ್ಷದ ಮೇಲಿನ ಬದ್ಧತೆ ನೋಡಿ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಚುನಾವಣೆಗೆ ತಮ್ಮ ಕ್ಷೇತ್ರ ಯಾವುದು ಅಂತ ಹೇಳದ ಮಹಾದೇವಪ್ಪ, ಇಡೀ ಕರ್ನಾಟಕವೇ ನನ್ನ ಕ್ಷೇತ್ರ, ವಿಧಿಬರಹ ಹೇಗಿದೆಯೋ ಹಾಗೆ ನಡೆಯುತ್ತದೆ ಎಂದು ಹೇಳಿದ್ದಾರೆ.