ವಸತಿ ಸಚಿವ ಎಂ. ಕೃಷ್ಣಪ್ಪ ಎದುರಾಳಿ ಯಾರು?

First Published 4, Mar 2018, 10:04 AM IST
Who will Contest Against Minister M Krishnappa
Highlights

ಕೃಷ್ಣಪ್ಪ ಅವರನ್ನೇ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿದ್ದರೂ ಫಲ ನೀಡಲಿಲ್ಲ. ಇನ್ನೂ ಸಮಯವಿದೆ ಎಂಬ ಅನುಮಾನದ ಮಾತು ಬಿಜೆಪಿ ಪಾಳೆಯದಿಂದ ಈಗಲೂ ಕೇಳಿಬರುತ್ತದೆ.

ಕಾಂಗ್ರೆಸ್‌ನಿಂದ ಇಲ್ಲಿ ಹಾಲಿ ಶಾಸಕ ಹಾಗೂ ಸಚಿವ ಎಂ. ಕೃಷ್ಣಪ್ಪ ಅವರೇ ಅಭ್ಯರ್ಥಿ. ಎಂ. ಕೃಷ್ಣಪ್ಪ ಅವರ ಭದ್ರಕೋಟೆ ಇದಾಗಿರುವುದರಿಂದ ಬಿಜೆಪಿ ಇಲ್ಲಿ ಹರಸಾಹಸ ಮಾಡಬೇಕಾದ ಸ್ಥಿತಿಯಲ್ಲಿದೆ. ಕೃಷ್ಣಪ್ಪ ಅವರನ್ನೇ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿದ್ದರೂ ಫಲ ನೀಡಲಿಲ್ಲ. ಇನ್ನೂ ಸಮಯವಿದೆ ಎಂಬ ಅನುಮಾನದ ಮಾತು ಬಿಜೆಪಿ ಪಾಳೆಯದಿಂದ ಈಗಲೂ ಕೇಳಿಬರುತ್ತದೆ. ಪಕ್ಷದ ವಕ್ತಾರ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಬಿಬಿಎಂಪಿಯ ಮಾಜಿ ಸದಸ್ಯ ರವೀಂದ್ರ ಅವರ ಹೆಸರುಗಳ ಪ್ರಮುಖವಾಗಿ ಚಾಲ್ತಿಯ ಲ್ಲಿವೆ. ರವೀಂದ್ರ ಅವರು ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದರು. ಜೆಡಿಎಸ್‌ನಲ್ಲಿ ಪ್ರಬಲ ಆಕಾಂಕ್ಷಿಗಳಿಲ್ಲ.

loader