ಹೊಸ ಲೋಕಸಭೆಯ ಸ್ಪೀಕರ್‌ ಸ್ಥಾನಕ್ಕೆ ನಿತಿನ್‌ ಗಡ್ಕರಿ, ಹರ್ಷವರ್ಧನ್‌, ಅರ್ಜುನ್‌ ಮೇಘವಾಲ್  ಹೀಗೆ ಬಹಳಷ್ಟುಹೆಸರುಗಳು ಓಡಾಡಿದರೂ ಕೊನೆಗೆ ಬಹುತೇಕ ಉತ್ತರ ಪ್ರದೇಶದ ಅತಿ ಹಿಂದುಳಿದ ವರ್ಗದ 7 ಬಾರಿ ಸಂಸದರಾದ ಸಂತೋಷ ಗಂಗ್ವಾರ್‌ ಹೆಸರು ಬಹುತೇಕ ಫೈನಲ್ ಆಗಿದೆ. ಹೊಸ ಸಂಸದರಿಗೆ ಪ್ರಮಾಣವಚನ ಬೋಧಿಸುವ ಹಂಗಾಮಿ ಸ್ಪೀಕರ್‌ ಆಗಿ ಗಂಗ್ವಾರ್‌ ಇರಲಿದ್ದು, ಬಹುತೇಕ ಅವರೇ ಮುಂದುವರೆಯಲಿದ್ದಾರಂತೆ.

ಚಿದು ಮಾತು ರಾಹುಲ್‌ ತಂದಿದ್ದೇಕೆ?

ದೇಶದಲ್ಲೆಡೆ ಪುಲ್ವಾಮ ನಂತರ ಯುದ್ಧದ ವಾತಾವರಣ ಇದ್ದಾಗ ಚಿದಂಬರಂ ಸೇನೆಯ ವಿಶೇಷ ಅಧಿಕಾರವನ್ನು ಕಸಿದುಕೊಳ್ಳುವ ಬಗ್ಗೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದ್ದು ದೊಡ್ಡ ಹಿನ್ನಡೆ ಆಗಲು ಕಾರಣ ಎಂದು ಕಾಂಗ್ರೆಸ್‌ ಸಭೆಯಲ್ಲಿ ಪ್ರಸ್ತಾಪವಾಯಿತು. ಆಗ ರಾಹುಲ್ ಚಿದು ಯಾರಿಗೂ ಏನೂ ಕೇಳೋದಿಲ್ಲ, ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಮಗ ಗೆಲ್ಲಬೇಕು ಎನ್ನೋದು ಬಿಟ್ಟರೆ ಚಿದು ಕೊಡುಗೆ ಏನು ಎಂದೆಲ್ಲ ಕೂಗಾಡಿದರಂತೆ. ಇದೆಲ್ಲ ನೋಡಿದರೆ ಮುಂದಿನ ದಿನಗಳಲ್ಲಿ ಅಲ್ಲಿ ಇಲ್ಲಿ ಒಡೆದರೂ ಆಶ್ಚರ್ಯ ಏನಿಲ್ಲ. 

- ಪ್ರಶಾಂತ್ ನಾತು, ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ