ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಗೃಹ ಖಾತೆ ಸದ್ಯದಲ್ಲಿ ಸಿಎಂ ಬಳಿಯೇ ಇದ್ದು ಅರಣ್ಯ ಸಚಿವ ರಮಾನಾಥ್ ರೈ ಗೃಹ ಸಚಿವರಾಗೋದು ಪಕ್ಕಾ ಎನ್ನಲಾಗುತ್ತಿದೆ.
ಬೆಂಗಳೂರು (ಸೆ.01): ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಗೃಹ ಖಾತೆ ಸದ್ಯದಲ್ಲಿ ಸಿಎಂ ಬಳಿಯೇ ಇದ್ದು ಅರಣ್ಯ ಸಚಿವ ರಮಾನಾಥ್ ರೈ ಗೃಹ ಸಚಿವರಾಗೋದು ಪಕ್ಕಾ ಎನ್ನಲಾಗುತ್ತಿದೆ.
ಅರಣ್ಯ ಖಾತೆ ಬದಲು ರಮಾನಾಥ್ ರೈಗೆ ಗೃಹ ಖಾತೆ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ರಮಾನಾಥ್ ರೈ ನಿವಾಸದಲ್ಲಿ ಭೇಟಿ ನೀಡಿ ಮಾರುಕತೆ ನಡೆಸಿದ್ದಾರೆ.
ಸಚಿವ ಖಾತೆ ಸದ್ಯ ಮುಖ್ಯಮಂತ್ರಿ ಬಳಿಯೇ ಇದೆ. ಅರಣ್ಯ ಖಾತೆ ಸಚಿವ ಬಿ. ರಮಾನಾಥ ರೈಗೆ ಈ ಖಾತೆ ವಹಿಸುವಂತೆ ಹೈಕಮಾಂಡ್ ಸೂಚನೆ ನೀಡಿತ್ತು.ಈ ಸಂಬಂಧ ರೈ ಜತೆಗೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದರು. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ ಹಾಗೂ ಕೊಲೆಗಳಿಗೆ ಸಚಿವ ರೈ ಕಾರಣ ಎಂದು ಆರೋಪಿಸಿರುವ ಬಿಜೆಪಿ, ರೈ ರಾಜೀನಾಮೆಗೆ ಆಗ್ರಹಿಸಿ ಮಂಗಳೂರು ಚಲೋ ಹಮ್ಮಿಕೊಂಡಿದೆ. ಈ ಹೊತ್ತಿನಲ್ಲಿ ರೈಗೆ ಗೃಹ ಖಾತೆ ನೀಡಿದರೆ, ಅದನ್ನು ವಿರೋಧಿಸಿ ಉಗ್ರ ಹೋರಾಟ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.
