ಸಿದ್ದರಾಮಯ್ಯ ಪದೇ ಪದೇ ಹೋದಲ್ಲಿ, ಬಂದಲ್ಲಿ ನಾನೇ ಸಿಎಂ ಅಂತಾ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಇದನ್ನೇ ಪುನರುಚ್ಛರಿಸಿದ್ದಾರೆ ಸಿದ್ದರಾಮಯ್ಯ.

ಬೆಂಗಳೂರು (ಸೆ.29): ಸಿದ್ದರಾಮಯ್ಯ ಪದೇ ಪದೇ ಹೋದಲ್ಲಿ, ಬಂದಲ್ಲಿ ನಾನೇ ಸಿಎಂ ಅಂತಾ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಇದನ್ನೇ ಪುನರುಚ್ಛರಿಸಿದ್ದಾರೆ ಸಿದ್ದರಾಮಯ್ಯ.

ಸೆ. 28 ರಂದು ಪಾವಗಡದಲ್ಲಿ ಸೋಲಾರ್ ಪ್ರೊಜೆಕ್ಟ್ ಪರಿಶೀಲನಾ ಕಾರ್ಯಕ್ರಮದಲ್ಲಿಯೂ ಮುಂದಿನ ಸಿಎಂ ನಾನೇ ಎಂದಿದ್ದರು ಇಷ್ಟೆ ಆಗಿದ್ದರೆ ಏನೋ ಅನ್ನಬಹುದಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ 2018 ಅನ್ನೋ ಅಡಿಬರಹದೊಂದಿಗೆ ಹತ್ತಾರು ಅಕೌಂಟ್​ಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಇದಕ್ಕೆ ಸಿದ್ದರಾಮಯ್ಯ ಆಪ್ತ ಬೆಂಬಲಿಗ ಮುಖಂಡರು, ಶಾಸಕರು, ಸಚಿವರು ಕೂಡ ಸಿದ್ದರಾಮಯ್ಯಗೆ ಸಪೋರ್ಟ್ ಮಾಡ್ತಿದ್ದಾರೆ.

ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ನಡೆ ಮೂಲ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಮುಂದಿನ ಸಿಎಂ ಅವರೇ ಅಂದ್ರೆ ಅದ್ಹೇಗೆ ಸಾಧ್ಯ.? ಪಕ್ಷವಿದೆ, ಪಕ್ಷಕ್ಕೊಂದು ಸಂಪ್ರದಾಯವಿದೆ. ಹೈಕಮಾಂಡ್ ಇದೆ. ಶಾಸಕಾಂಗ ಪಕ್ಷದ ಸಭೆ ಇರುತ್ತೆ. ಅದಕ್ಕೂ ಮೊದಲ ಪಕ್ಷ ಅಧಿಕಾರಕ್ಕೆ ಬರಬೇಕು. ಇದಕ್ಕೂ ಮೊದಲು ಮುಂದಿನ ಸಿಎಂ ನಾನೇ ಅನ್ನೋದು ಸರಿಯಲ್ಲ ಅಂತಾ ಹೇಳಿದ್ದಾರೆ.

ಒಂದೆಡೆ ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎನ್ನುತ್ತಾ ರಾಜ್ಯ ಸಂಚಾರ ಮಾಡುತ್ತಿದ್ದರೆ ಇತ್ತ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳು ಸದ್ದಿಲ್ಲದೇ ಸಿಎಂ ಕುರ್ಚಿ ಏರಲು ತನ್ನದೇ ಆದ ತಯಾರಿ ನಡೆಸಿದ್ದಾರೆ. ಮುಂದೆ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇ ಅನ್ನೋ ಸುಳಿವು ಕಾಂಗ್ರೆಸ್ ನಾಯಕರಲ್ಲಿ ಮನೆ ಮಾಡಿದೆ. ಹೀಗಾಗಿ ಸಿದ್ದರಾಮಯ್ಯ ಜೊತೆ ಸ್ಪರ್ಧೆಗೆ ತಯಾರಾಗಿದ್ದಾರೆ. ಅಷ್ಟೇ ಅಲ್ಲ. ತಾವು ಸಿಎಂ ಆಗ್ಲಿಕ್ಕೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಅದೆಲ್ಲವನ್ನೂ ಮಾಡಿದ್ದಾರೆ.