ಪ್ರಸಕ್ತ ಸಂಸತ್ ಅಧಿವೇಶನ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಶೀಘ್ರ ವಿಧಾನಸಭಾ ಚುನಾವಣೆ ಎದುರಿಸಲಿರುವ ಕರ್ನಾಟಕದಿಂದ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಕುತೂಹಲ ತೀವ್ರಗೊಂಡಿದೆ. ಕಳೆದ ಮೂರು ವರ್ಷಗಳ ಮೋದಿ ಅವರ ಆಡಳಿತದ ವೈಖರಿ ಗಮನಿಸಿದಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಒಂದಿಷ್ಟು ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಲೇ ಬಂದಿದೆ. ಹೀಗಾಗಿ, ಈ ಬಾರಿ ಕರ್ನಾಟಕಕ್ಕೂ ಪ್ರಾಶಸ್ತ್ಯ ಸಿಗಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಕಂಡು ಬಂದಿದೆ. ಆದರೆ, ಯಾರಿಗೆ ಸಚಿವ ಸ್ಥಾನದ ಅದೃಷ್ಟ ಖುಲಾಯಿಸುತ್ತದೆ ಎಂಬುದರ ಬಗ್ಗೆ ಮಾತ್ರ ರಾಜ್ಯ ಬಿಜೆಪಿಯ ಹಿರಿಯ ನಾಯಕರಿಗೂ ಯಾವುದೇ ಸುಳಿವು ಇಲ್

ಬೆಂಗಳೂರು(ಆ.02): ಪ್ರಸಕ್ತ ಸಂಸತ್ ಅಧಿವೇಶನ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಶೀಘ್ರ ವಿಧಾನಸಭಾ ಚುನಾವಣೆ ಎದುರಿಸಲಿರುವ ಕರ್ನಾಟಕದಿಂದ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಕುತೂಹಲ ತೀವ್ರಗೊಂಡಿದೆ. ಕಳೆದ ಮೂರು ವರ್ಷಗಳ ಮೋದಿ ಅವರ ಆಡಳಿತದ ವೈಖರಿ ಗಮನಿಸಿದಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಒಂದಿಷ್ಟು ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಲೇ ಬಂದಿದೆ. ಹೀಗಾಗಿ, ಈ ಬಾರಿ ಕರ್ನಾಟಕಕ್ಕೂ ಪ್ರಾಶಸ್ತ್ಯ ಸಿಗಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಕಂಡು ಬಂದಿದೆ. ಆದರೆ, ಯಾರಿಗೆ ಸಚಿವ ಸ್ಥಾನದ ಅದೃಷ್ಟ ಖುಲಾಯಿಸುತ್ತದೆ ಎಂಬುದರ ಬಗ್ಗೆ ಮಾತ್ರ ರಾಜ್ಯ ಬಿಜೆಪಿಯ ಹಿರಿಯ ನಾಯಕರಿಗೂ ಯಾವುದೇ ಸುಳಿವು ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರ ಜೋಡಿ ರಾಜ್ಯದ ಎಲ್ಲ ಬಿಜೆಪಿ ಸಂಸದರ ಬಗ್ಗೆಯೂ ಸಮಗ್ರ ಮಾಹಿತಿ ಸಂಗ್ರಹಿಸಿದೆ. ತಮ್ಮದೇ ಆದ ಮೂಲಗಳಿಂದ ಅಷ್ಟೇ ಅಲ್ಲದೆ, ರಾಜ್ಯ ನಾಯಕರೊಂದಿಗೂ ಯಾವ ಸಂಸದರು ಹೇಗೆ ಎಂಬುದರ ಸ್ಥೂಲ ವಿವರ ಪಡೆದುಕೊಂಡಿದ್ದಾರೆ. ಆದರೆ, ಯಾರನ್ನು ಸಚಿವರನ್ನಾಗಿಸಲಾಗುವುದು ಎನ್ನುವ ಗುಟ್ಟು ಮಾತ್ರ ಬಿಟ್ಟು ಕೊಟ್ಟಿಲ್ಲ.

ಯುವಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ತಮ್ಮ ಶಕ್ತಿಮೀರಿ ಕೆಲಸ ಮಾಡಬಲ್ಲಂಥ ಸಂಸದರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಲೋಚನೆ ಮೋದಿ-ಶಾ ಅವರಲ್ಲಿದೆ ಎಂಬ ಮಾತೂ ಕೇಳಿಬರುತ್ತಿದೆ. ಸದ್ಯ ಕರ್ನಾಟಕದಿಂದ ಮೂವರು ಸಚಿವರಿದ್ದಾರೆ. ಈ ಪೈಕಿ ಅನಂತಕುಮಾರ್ ಮತ್ತು ಡಿ.ವಿ.ಸದಾನಂದ ಗೌಡ ಅವರು ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದರೆ ರಮೇಶ್ ಜಿಗಜಿಣಗಿ ಅವರು ರಾಜ್ಯ ಸಚಿವ ದರ್ಜೆ ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಸಂಪುಟ ಸಚಿವ ರಾಗಿದ್ದರೂ ಅವರ ಕೋಟಾ ಆಂ‘್ರಪ್ರದೇಶವೆಂದೇ ಪರಿಗಣಿಸಲಾಗುತ್ತದೆ. ಸದ್ಯದ ಮಾಹಿತಿ ಅನುಸಾರ ಇನ್ನೂ ಇಬ್ಬರಿಗೆ ಸಚಿವ ಸ್ಥಾನ ಲಭಿಸುವ ಸಂ‘ವವಿದೆ. ಆ ಇಬ್ಬರು ಯಾರಾಗಬಹುದು? ಅವರ ಆಯ್ಕೆಗೆ ಮಾನದಂಡಗಳೇನು ಎಂಬ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ಬಿರುಸಿನಿಂದ ಸಾಗಿದೆ.

ಲಿಂಗಾಯತರಿಗೆ 1 ಸ್ಥಾನ ಪಕ್ಕಾ:

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಸ್ಥಾನಮಾನ ಕುರಿತಂತೆ ರಾಜ್ಯಾದ್ಯಂತ ತೀವ್ರ ವಾದ-ಪ್ರತಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವೀರಶೈವ ಲಿಂಗಾಯತ ಸಮುದಾಯದ ಸಂಸದರೊಬ್ಬರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಸದರು ಎಂದರೆ- ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ, ಪಿ.ಸಿ.ಗದ್ದಿ ಗೌಡರ್, ಕರಡಿ ಸಂಗಣ್ಣ, ಭಗವಂತ ಖೂಬಾ, ಜಿ.ಎಂ.ಸಿದ್ದೇಶ್ವರ್.

ಈ ಪೈಕಿ ಸಿದ್ದೇಶ್ವರ್ ಅವರು ಈಗಾಗಲೇ ಒಂದು ಬಾರಿ ಸಚಿವರಾಗಿ ಕೆಳಗಿಳಿದಿದ್ದಾರೆ. ಇನ್ನುಳಿದವರ ಪೈಕಿ ಹಿರಿಯ ಸಂಸದರು ಎಂದರೆ ಅದು ಬೆಳಗಾವಿಯ ಸುರೇಶ್ ಅಂಗಡಿ. ಮೂರು ಬಾರಿ ಸಂಸದರಾಗಿದ್ದ ವರು. ಹಿಂದೆ ಯಡಿಯೂರಪ್ಪ ಅವರೊಂದಿಗೆ ಉತ್ತಮ ಸಂಬಂ‘ವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧ ಹಳಸಿದೆ ಎಂಬ ಮಾತು ಕೇಳಿಬರುತ್ತಿದೆ. ಯಡಿಯೂರಪ್ಪ ಅವರ ಮಾತು ಈ ವಿಷಯದಲ್ಲಿ ಪರಿಗಣಿತವಾಗುತ್ತದೆಯೇ ಎಂಬುದೂ ಸ್ಪಷ್ಟವಿಲ್ಲ. ಜತೆಗೆ ಬೆಳಗಾವಿಯ ಪಕ್ಷ ರಾಜಕಾರಣದಲ್ಲೂ ಗುಂಪುಗಾರಿಕೆ ಪ್ರಬಲವಾಗಿ ಕಂಡು ಬಂದಿರುವುದರಿಂದ ಅಂಗಡಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬುದು ಅನುಮಾನವಿದೆ.

ಹಾವೇರಿ ಸಂಸದ ಶಿವಕುಮಾರ್ ಉದಾಸಿ ಮತ್ತು ‘ಗವಂತ ಖೂಬಾ ಅವರಿಬ್ಬರೂ ಎಂಜಿನಿಯರಿಂಗ್ ಪದವೀ‘ರರು. ಉದಾಸಿ ಎರಡನೇ ಬಾರಿ ಸಂಸದರಾ ಗಿದ್ದರೆ, ಖೂಬಾ ಮೊದಲ ಬಾರಿಗೆ ಸಂಸದರಾಗಿದ್ದಾರೆ. ಇನ್ನು ಬಾಗಲಕೋಟೆಯ ಗದ್ದಿಗೌಡರ್ ಅವರು ಹಿರಿಯ ಸಂಸದರಾಗಿದ್ದರೂ ಜಿಲ್ಲೆ ಬಿಟ್ಟು ಹೊರಗೆ ಬಂದವರಲ್ಲ. ಕರಡಿ ಸಂಗಣ್ಣ ಅವರೂ ಮೊದಲ ಬಾರಿಗೆ ಸಂಸದರಾಗಿದ್ದರೂ ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅಂಗಡಿ, ಉದಾಸಿ, ಗದ್ದಿಗೌಡರ್ ಅವರಿಬ್ಬರೂ ಮುಂಬೈ ಕರ್ನಾಟಕ ಪ್ರದೇಶಕ್ಕೆ ಸೇರಿ ದವರು. ಈಗಾಗಲೇ ಆ ಪ್ರದೇಶದಲ್ಲಿನ ರಮೇಶ್ ಜಿಗಜಿಣಗಿ ಅವರು ಸಚಿವರಾಗಿರುವುದರಿಂದ ಮತ್ತೊಬ್ಬರಿಗೆ ಸಿಗುತ್ತಾ ಎಂಬುದು ಅನುಮಾನವಿದೆ. ಹಾಗೊಂದು ವೇಳೆ ಮುಂಬೈ ಕರ್ನಾಟಕಕ್ಕೆ ಬೇಡ ಎಂದಾದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ಖೂಬಾ ಮತ್ತು ಕರಡಿ ಸಂಗಣ್ಣ ಅವರ ಪೈಕಿ ಒಬ್ಬರ ಪಾಲಾಗಬಹುದು.

ಇನ್ನು ಕರಾವಳಿ ಭಾಗಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ಆಡಳಿತಾ ರೂಢ ಕಾಂಗ್ರೆಸ್ಸಿಗೆ ಪ್ರತಿಯಾಗಿ ಕರಾವಳಿ ಭಾಗದಲ್ಲಿ ಹಿಡಿತ ಸಾಧಿಸಬೇಕು ಎಂಬ ಉದ್ದೇಶದಿಂದ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ ಅಥವಾ ದಕ್ಷಿಣ ಕನ್ನಡದ ನಳಿನ್‌ಕುಮಾರ್ ಕಟೀಲು ಅವರಲ್ಲಿ ಒಬ್ಬರಿಗೆ ಅವಕಾಶವಿದೆ. ಶೋಭಾ ಕರಂದ್ಲಾಜೆ ಅವರು ಹಿಂದೆ ರಾಜ್ಯದಲ್ಲಿ ಸಚಿವರಾಗಿ ಉತ್ತಮ ಹೆಸರು ಗಳಿಸಿದ್ದರು ಮತ್ತು ಮಹಿಳೆ ಎಂಬುದು ಪ್ಲಸ್ ಪಾಯಿಂಟ್. ಇವರನ್ನು ಹೊರತುಪಡಿಸಿ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿ ಮೈಸೂರಿನ ಸಂಸದರಾಗಿರುವ ಪ್ರತಾಪ್ ಸಿಂಹ ಅವರ ಹೆಸರೂ ಕೇಳಿಬರುತ್ತಿದೆ.