Asianet Suvarna News Asianet Suvarna News

ರಾಧಿಕಾ ಜತೆಗಿರುವ ವಿವೇಕ್​ ರಾಜ್ ಯಾರು ಗೊತ್ತಾ?

who is that vivek raj who appears with radhika

ಬೆಂಗಳೂರು(ಅ.04): ರಾಧಿಕಾ ಕುಮಾರಸ್ವಾಮಿ ಮರು ಮದುವೆ ಆಗಿದ್ದಾರೆಂದು ಫೇಸ್ಬುಕ್`ನಲ್ಲಿ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ರಾಧಿಕಾ ಸ್ಪಷ್ಟನೆಯನ್ನೂ ನೀಡಿಯಾಗಿದೆ. ವಿವೆಕ್ ನನ್ನ ಕುಟುಂಬದ ಸ್ನೇಹಿತ ಎಂದು ತಿಳಿಸಿದ್ದಾರೆ.

ಅಂದಹಾಗೆ, ಫೋಟೋದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆ ಕಾಣಿಸಿಕೊಂಡಿರುವ ವಿವೇಕ್ ರಾಜ್, ರಾಧಿಕಾ ಸಹೋದರನ ಗೆಳೆಯ. ಉದ್ಯಮಿ ವಿವೇಕ್​ ರಾಜ್​ ಬಹುಕೋಟಿ ಒಡೆಯ. ರಿಯಲ್​ ಎಸ್ಟೇಟ್​, ಗಣಿಗಾರಿಕೆ, ಪವನ ಹಾಗೂ ಸೌರಶಕ್ತಿ ವ್ಯವಹಾರ ನಡೆಸುತ್ತಿರುವ ವಿವೇಕ್​ ರಾಜ್, ಜಿಂಬಾಂಬ್ವೆಯಲ್ಲಿ  ಗಣಿಗಾರಿಕೆ ಗುತ್ತಿಗೆ ಪಡೆದ ಮೊದಲ ಕನ್ನಡಿಗ.