ಭಾರತ ವಿಭಜನೆಗೆ ನೆಹರೂ, ಪಟೇಲ್‌, ಆಜಾದ್‌ ಕಾರಣ: ಫಾರೂಕ್‌ ಅಬ್ದುಲ್ಲಾ

First Published 5, Mar 2018, 9:12 AM IST
Who Is Reason Of India Pak Separated From India
Highlights

ಮಹಮ್ಮದ್‌ ಆಲಿ ಜಿನ್ನಾ ಮುಸ್ಲಿಮರಿಗಾಗಿ ದೇಶವಿಭಜನೆಗೆ ಬಯಸಿರಲಿಲ್ಲ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ಶ್ರೀನಗರ: ಮಹಮ್ಮದ್‌ ಆಲಿ ಜಿನ್ನಾ ಮುಸ್ಲಿಮರಿಗಾಗಿ ದೇಶವಿಭಜನೆಗೆ ಬಯಸಿರಲಿಲ್ಲ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ಮುಸ್ಲಿಂ ಮತ್ತು ಸಿಖ್ಖರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಜಿನ್ನಾ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಜವಹರಲಾಲ್‌ ನೆಹರು, ಮೌಲಾನಾ ಆಜಾದ್‌ ಮತ್ತು ಸರ್ದಾರ್‌ ಪಟೇಲ್‌ ಸೇರಿದಂತೆ ಕೆಲ ತಿರಸ್ಕರಿಸಿದರು.

ಜಿನ್ನಾ ಪ್ರತ್ಯೇಕ ದೇಶಕ್ಕೆ ಒತ್ತಾಯಿಸಿದರು. ಹೀಗಾಗಿ ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಯಿತು. ಜಿನ್ನಾ ದೇಶವನ್ನು ವಿಭಜನೆ ಮಾಡಿಲ್ಲ ಎಂದು ಹೇಳಿದ್ದಾರೆ. ಆಯೋಗದ ನಿರ್ಣಯವನ್ನು ಅಂಗೀಕರಿಸಿದ್ದರೆ ಪಾಕಿಸ್ತಾನ, ಬಾಂಗ್ಲಾ ಎರಡೂ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.

loader