Asianet Suvarna News Asianet Suvarna News

ಗಗನ್ ಯಾನ್‌ಗೆ ನಾನು, ಇವ್ರು, ಮತ್ತೊಬ್ರು ಫಿಕ್ಸ್: ಹೌದಾ ಮೋದಿಜೀ?

2022ಕ್ಕೆ ಗಗನಯಾತ್ರೆಗೆ ಸಜ್ಜಾದ ಇಸ್ರೋ! ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿರುವ ಭಾರತೀಯರು ಯಾರು?! ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದೆ ಉತ್ತರ! ಬಾಹ್ಯಾಕಾಶಕ್ಕೆ ಮೋದಿ, ಅಂಬಾನಿ, ಅದಾನಿ ಹೋಗ್ತಾರಂತೆ
 

Who are the 3 astronauts on ISRO space mission?
Author
Bengaluru, First Published Aug 29, 2018, 12:16 PM IST

ನವದೆಹಲಿ(ಆ.29): 2022ಕ್ಕೆ ಇಸ್ರೋ ಮಾನವಸಹಿತ ಗಗನಯಾತ್ರೆ ಕೈಗೊಳ್ಳಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಯೋಜನೆಗೆ ಗಗನ್ ಯಾನ್ ಎಂದು ಈಗಾಗಲೇ ಹೆಸರಿಡಲಾಗಿದೆ. ಆದರೆ ಬಾಹ್ಯಾಕಾಶಕ್ಕೆ ಹೋಗಲಿರುವ ಮೂವರು ಭಾರತೀಯ ಗಗನಯಾನಿಗಳು ಯಾರು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಇಸ್ರೋದ ಗಗನ್ ಯಾನ್ ಯೋಜನೆಯಂತೆ ಬಾಹ್ಯಾಕಾಶಕ್ಕೆ ಹೋಗಲಿರುವ ಮೂವರು ಗಗನಯಾತ್ರಿಗಳು ಯಾರು ಎಂಬ ಕುರತೂಹಲ ಇದೀಗ ಮೂಡಿದೆ. ಈ ಗಗನಯಾತ್ರಿಗಳಿಗೆ ಎಲ್ಲಿ ಮತ್ತು ಹೇಗೆ ತರಬೇತಿ ನೀಡಲಾಗುತ್ತದೆ ಎಂಬ ಪ್ರಶ್ನೆಗಳೂ ಮೂಡುವುದು ಸಹಜ.

ಆದರೆ ಸಾಮಾಜಿಕ ಜಾಲತಾಣಗಳು ಈ ಕುರಿತು ತಮ್ಮದೇ ಆದ ಅಭಿಪ್ರಾಯ ಹೊಂದಿದ್ದು, ಅದರಂತೆ ಗಗನ್ ಯಾನ್ ಯೋಜನೆಯಂತೆ ಬಾಹ್ಯಾಕಾಶಕ್ಕೆ ಕಾಲಿಡುವ ಮೂವರು ಭಾರತೀಯರು ಯಾರು ಎಂಬುದನ್ನು ಪತ್ತೆ ಹಚ್ಚಿವೆ.

ಅದರಂತೆ ಪ್ರಧಾನಿ ನರೇಂದ್ರ ಮೋದಿ, ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಗುಜರಾತ್ ಉದ್ಯಮಿ ಅದಾನಿ ಅವರೇ ಗಗನಯಾತ್ರೆ ಕೈಗೊಳ್ಳಲಿರುವ ಭಾರತೀಯರಂತೆ.

 ಕುರಿತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದು, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಭೂಮಿಯ ಹೊರತಾಗಿ ಬೇರೊಂದು ಜಾಗ ಹುಡುಕಲು ಈ ಮೂವರೂ ಗಗನಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಅಪಹಾಸ್ಯ ಮಾಡಲಾಗಿದೆ.

Follow Us:
Download App:
  • android
  • ios