ರಮ್ಯಾ ಎಲ್ಲಿದ್ದೀಯಮ್ಮಾ?

First Published 20, Mar 2018, 1:43 PM IST
Where is Ramya
Highlights

ನಮ್ಮ ಮಂಡ್ಯದ ಮಾಜಿ ಸಂಸದೆ ರಮ್ಯಾ ಸಿಕ್ಕರೆ ದಯವಿಟ್ಟು ನನಗೆ ಫೋನ್ ಮಾಡಲು ಹೇಳಿ. ನಾನೆಷ್ಟು ಬಾರಿ ಮಾಡಿದರೂ ಫೋನ್ ತಗೊಳ್ಳಲ್ಲ, ವಾಪಸ್ ಮೆಸೇಜ್ ಕೂಡ ಮಾಡೋಲ್ಲ. ಸ್ವಲ್ಪ ಅರ್ಜೆಂಟ್ ಆಗಿ ಮಾತನಾಡಬೇಕಿತ್ತು’ ಎಂದು ಮಂಡ್ಯದ ವಯೋವೃದ್ಧ ಕಾಂಗ್ರೆಸ್ ನಾಯಕ ಜಿ.ಮಾದೇಗೌಡರು ದೆಹಲಿಯ ಕಾಂಗ್ರೆಸ್ ನಾಯಕರಿಗೆ ಹಾಗೂ ಕೆಲ ಹಿರಿಯ ಪತ್ರಕರ್ತರಿಗೆ ಫೋನ್ ಮಾಡಿ ಮಾಡಿ ಕೇಳಿಕೊಂಡಿದ್ದಾರೆ.

ಬೆಂಗಳೂರು (ಮಾ. 20): ನಮ್ಮ ಮಂಡ್ಯದ ಮಾಜಿ ಸಂಸದೆ ರಮ್ಯಾ ಸಿಕ್ಕರೆ ದಯವಿಟ್ಟು ನನಗೆ ಫೋನ್ ಮಾಡಲು ಹೇಳಿ. ನಾನೆಷ್ಟು ಬಾರಿ ಮಾಡಿದರೂ ಫೋನ್ ತಗೊಳ್ಳಲ್ಲ, ವಾಪಸ್ ಮೆಸೇಜ್ ಕೂಡ ಮಾಡೋಲ್ಲ. ಸ್ವಲ್ಪ ಅರ್ಜೆಂಟ್ ಆಗಿ ಮಾತನಾಡಬೇಕಿತ್ತು’ ಎಂದು ಮಂಡ್ಯದ ವಯೋವೃದ್ಧ ಕಾಂಗ್ರೆಸ್ ನಾಯಕ ಜಿ.ಮಾದೇಗೌಡರು ದೆಹಲಿಯ ಕಾಂಗ್ರೆಸ್ ನಾಯಕರಿಗೆ ಹಾಗೂ ಕೆಲ ಹಿರಿಯ ಪತ್ರಕರ್ತರಿಗೆ ಫೋನ್ ಮಾಡಿ ಮಾಡಿ ಕೇಳಿಕೊಂಡಿದ್ದಾರೆ.

ಮಾದೇಗೌಡರ ಫೋನ್ ತೆಗೆದುಕೊಂಡ ದೆಹಲಿಯ ಕೆಲ ಹಿರಿಯ ಕಾಂಗ್ರೆಸ್ ನಾಯಕರು, ‘ಅಯ್ಯೋ ಗೌಡರೇ, ನಮಗೇ ರಮ್ಯಾ ಸಿಗೋದಿಲ್ಲ. ಸಿಕ್ಕರೂ ಮಾತಾಡೋದಿಲ್ಲ ಬಿಡಿ’ ಎಂದು ಹೇಳಿದ್ದರೆ, ಕೆಲ ಪತ್ರಕರ್ತರು ‘ಮಾದೇಗೌಡರಿಗೆ ವಾಪಸ್ ಕಾಲ್ ಮಾಡಬೇಕಂತೆ’ ಎಂದು ರಮ್ಯಾಗೆ ಮೆಸೇಜ್ ಮಾಡಿದ್ದರೂ ರಮ್ಯಾ ಹಾಂ ಹೂಂ ಎನ್ನುತ್ತಿಲ್ಲ. ‘ಆಕಾಶದೆತ್ತರಕ್ಕೆ ಬೆಳೆದರೂ ಜಮೀನಿನ ಮೇಲೆ ಕಾಲು ಗಟ್ಟಿಯಾಗಿ ಇಟ್ಟಿರಬೇಕು’ ಎನ್ನುವುದು ಸೋಶಿಯಲ್ ಮೀಡಿಯಾ ನೋಡಿಕೊಳ್ಳುವವರಿಗೆ ಅನ್ವಯಿಸುವುದಿಲ್ಲವೋ ಏನೋ. 

ರಾಜಕಾರಣದ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader