Asianet Suvarna News Asianet Suvarna News

ಲಿಬಿಯಾದ ಸರ್ವಾಧಿಕಾರಿ ಗಡಾಫಿ ಜೊತೆ ಕತ್ರೀನಾ!

. ನಟಿಯಾಗುವುದಕ್ಕೂ ಮುನ್ನ ಕತ್ರೀನಾ ಮಾಡೆಲಿಂಗ್ ವೃತ್ತಿ ಮಾಡುತ್ತಿದ್ದರು. ಇಂಥ ದಿನಗಳಲ್ಲೇ ಅವರು ಲಿಬಿಯಾದಲ್ಲಿ ನಡೆದ ಫ್ಯಾಶನ್ ಶೋದಲ್ಲಿ ಭಾಗಿಯಾಗಿದ್ದರು. ಅಂದು ಕತ್ರೀನಾ ಜೊತೆ ಶೋದಲ್ಲಿ ಭಾಗವಹಿಸಿದ್ದ ಮಾಡೆಲ್ಗಳ ಪೈಕಿ ಒಬ್ಬರಾದ ಶಮಿತಾ ಸಿಂಘಾ ಹಳೆಯ ಫೋಟೋ ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಅದು ಭಾರೀ ಸುದ್ದಿ ಮಾಡುತ್ತಿದೆ.

When Katrina Kaif met late Libyan dictator Muammar Gaddafi
  • Facebook
  • Twitter
  • Whatsapp

ಮುಂಬೈ(ಜು.10): ನಟಿ ಕತ್ರೀನಾ ಕೈಫ್ ಹೀರೋಗಳ ಜೊತೆ ಇರುವ ಫೋಟೋ ಬಿಡುಗಡೆಯಾಗುವುದು ಹೊಸದೇನಲ್ಲ. ಆದರೆ ಇದೇ ಮೊದಲ ಬಾರಿಗೆ ಕತ್ರೀನಾ, ಲಿಬಿಯಾದ ಮಾಜಿ ಸರ್ವಾಧಿಕಾರಿ ಅಧ್ಯಕ್ಷ ಮಹಮ್ಮದ್ ಗಡಾಫಿ ಜೊತೆ ಇರುವ ಫೋಟೋ ಒಂದು ಬಿಡುಗಡೆಯಾಗಿದ್ದು, ಅದು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನಟಿಯಾಗುವುದಕ್ಕೂ ಮುನ್ನ ಕತ್ರೀನಾ ಮಾಡೆಲಿಂಗ್ ವೃತ್ತಿ ಮಾಡುತ್ತಿದ್ದರು. ಇಂಥ ದಿನಗಳಲ್ಲೇ ಅವರು ಲಿಬಿಯಾದಲ್ಲಿ ನಡೆದ ಫ್ಯಾಶನ್ ಶೋದಲ್ಲಿ ಭಾಗಿಯಾಗಿದ್ದರು. ಅಂದು ಕತ್ರೀನಾ ಜೊತೆ ಶೋದಲ್ಲಿ ಭಾಗವಹಿಸಿದ್ದ ಮಾಡೆಲ್‌ಗಳ ಪೈಕಿ ಒಬ್ಬರಾದ ಶಮಿತಾ ಸಿಂಘಾ ಹಳೆಯ ಫೋಟೋ ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಅದು ಭಾರೀ ಸುದ್ದಿ ಮಾಡುತ್ತಿದೆ. ಫೋಟೋದಲ್ಲಿ ಕತ್ರೀನಾ ಜೊತೆ ನೇಹಾ ಧೂಪಿಯಾ, ಅದಿತಿ ಗೋವಿತ್ರಿಕರ್, ಅಂಚಲ್ ಕುಮಾರ್ ಕುಡಾ ಇದ್ದಾರೆ.

Follow Us:
Download App:
  • android
  • ios