ನವದೆಹಲಿ (ಡಿ.11): ಎರಡನೇ ಪುತ್ರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಮೊದಲ ಪುತ್ರ ರಾಜೀವ್ ಗಾಂಧಿ ಪೈಲಟ್ ವೃತ್ತಿ ತ್ಯಜಿಸಬೇಕು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಯಸಿದ್ದರು.

ಈ ಸಂಬಂಧ ರಾಜೀವ್ ಗಾಂಧಿಯನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಇಂದಿರಾ ಆಧ್ಯಾತ್ಮ ಗುರು ಓಶೋ ಕಾರ್ಯದರ್ಶಿ ಲಕ್ಷ್ಮೀ ಸಹಾಯ ಪಡೆದಿದ್ದರು.

ಕವಿ ಕಲಾವಿದ ರಶೀದ್ ಮ್ಯಾಕ್ಸ್ವೆಲ್ `ದ ಓನ್ಲಿ ಲೈಫ್, ಓಶೋ, ಲಕ್ಷ್ಮೀ ಆ್ಯಂಡ್ ದ ವರ್ಲ್ಡ್ ಇನ್ ಕ್ರೈಸಿಸ್' ಎಂಬ ಪುಸ್ತಕದಲ್ಲಿ ಈ ಸಂಗತಿ ನಮೂದಿಸಲಾಗಿದೆ. ಇಂದಿರಾ ಮನೆಗೆ ಬರಲು ಲಕ್ಷ್ಮೀ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು.