‘ಅಝರ್‌ಬೈಜಾನ್ ರಾಜಧಾನಿ ಬಾಕು ವಿಮಾನ ನಿಲ್ದಾಣದಲ್ಲಿ ನಮಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲು 19 ತಾಸು ವಿಳಂಬ ವಾಯಿತು.

ಬಾಕು(ಅಝರ್‌ಬೈಜಾನ್): ಮುಂಬೈ-ಲಂಡನ್‌ಗೆ ಬ್ರಿಟಿಷ್ ಏರ್‌ವೇಸ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಉಂಟಾದ ಪರಿಣಾಮ ವಿಮಾನ ಅಝರ್ ಬೈಜಾನ್‌ನಲ್ಲಿ ತುರ್ತು ಭೂಸ್ಪರ್ಶವಾಯಿತು.

ಈ ವೇಳೆ ಪ್ರಯಾಣಿಕರ ಪೈಕಿ ನಾನೂ ಓರ್ವಳಾಗಿದ್ದು, ಪಡಬಾರದ ಕಷ್ಟಪಟ್ಟೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಾಜಿ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅಳಲು ತೋಡಿಕೊಂಡಿದ್ದಾರೆ. ‘ಅಝರ್‌ಬೈಜಾನ್ ರಾಜಧಾನಿ ಬಾಕು ವಿಮಾನ ನಿಲ್ದಾಣದಲ್ಲಿ ನಮಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲು 19 ತಾಸು ವಿಳಂಬ ವಾಯಿತು. ನಾವೆಲ್ಲ ಪ್ರಯಾಣಿಕರು ನಿರೀಕ್ಷಣಾ ಕೊಠಡಿಯ ನೆಲಹಾಸಿನ ಮೇಲೆಯೇ ಮಲಗಿದೆವು. ನಮ್ಮ ಬ್ಯಾಗ್‌ಗಳನ್ನು ತೆಗೆದುಕೊಳ್ಳಲು ನಿರಾಕರಿಸಲಾಗಿತ್ತು. ಬ್ಯಾಗಿನಲ್ಲಿ ಬಿಟ್ಟಿದ್ದ ಮಾತ್ರೆಗಳನ್ನು ಸೇವಿಸಲೂ ಸಾಧ್ಯವಾಗಿರಲಿಲ್ಲ ಉಪಾಹಾರವನ್ನೂ ನೀಡಲಿಲ್ಲ’ ಎಂದಿದ್ದಾರೆ.