ಹೇರಳವಾಗಿ ಭತ್ತ ಬೆಳೆಯುವ ಮಾನವಿ, ಸಿಂಧನೂರು, ತಾಲ್ಲೂಕುಗಳಲ್ಲಿ ಈಗ ನೀರಿನ ಸಮಸ್ಯೆ ಶುರುವಾಗಿದೆ. ಈ ಭಾಗದ ಜನರ ನೀರಿನ ಆಸರೆಯಾಗಿರುವ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಹರಿಸುವುಸು ನಿಲ್ಲಿಸಲಾಗಿದೆ. ಇದರ ಪರಿಣಾಮ ಎಕರೆಗೆ 30-40 ಸಾವಿರ ರೂಪಾಯಿ ವೆಚ್ಚ ಮಾಡಿ ಭತ್ತ ಒಣಗಿ ಹೋಗುತ್ತಿದೆ.  ಬ್ಯಾಂಕ್​ಗಳಲ್ಲಿ ಸಾಲ ಸೋಲ ಮಾಡಿ ಭತ್ತ ಬೆಳೆದ ರೈತರು ಕಾಲುವೆಗಳಿಗೆ ನೀರು ಹರಿಸದ ಅಧಿಕಾರಿಗಳ ಕ್ರಮದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ರಾಯಚೂರು(ಅ.14): ಬರದ ನಾಡು ಎಂಬ ಅಪಕೀರ್ತಿಗೆ ಒಳಗಾದ ರಾಯಚೂರಿನಲ್ಲಿ ಮತ್ತೆ ಈ ಬಾರಿಯೂ ಬರದ ಛಾಯೆ ಆವರಿಸಿದೆ. ಹೇರಳವಾಗಿ ಭತ್ತ ಬೆಳೆಯುವ ಮಾನವಿ, ಸಿಂಧನೂರು, ತಾಲ್ಲೂಕುಗಳಲ್ಲಿ ಈಗ ನೀರಿನ ಸಮಸ್ಯೆ ಶುರುವಾಗಿದೆ.

ಈ ಭಾಗದ ಜನರ ನೀರಿನ ಆಸರೆಯಾಗಿರುವ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಹರಿಸುವುಸು ನಿಲ್ಲಿಸಲಾಗಿದೆ. ಇದರ ಪರಿಣಾಮ ಎಕರೆಗೆ 30-40 ಸಾವಿರ ರೂಪಾಯಿ ವೆಚ್ಚ ಮಾಡಿ ಭತ್ತ ಒಣಗಿ ಹೋಗುತ್ತಿದೆ. ಬ್ಯಾಂಕ್​ಗಳಲ್ಲಿ ಸಾಲ ಸೋಲ ಮಾಡಿ ಭತ್ತ ಬೆಳೆದ ರೈತರು ಕಾಲುವೆಗಳಿಗೆ ನೀರು ಹರಿಸದ ಅಧಿಕಾರಿಗಳ ಕ್ರಮದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.