ಮಹಿಳೆಯೊಬ್ಬರ ಒಪ್ಪಿಗೆ ಇಲ್ಲದ ವಾಟ್ಸಾಪ್ ಸೆಕ್ಸ್ ಗ್ರೂಪ್ ಒಂದಕ್ಕೆ ಸೇರಿಸಿದ ನಿಟ್ಟಿನಲ್ಲಿ ಮುಂಬೈ ಪೊಲೀಸರ ಆತನನ್ನು ಬಂಧಿಸಿದ್ದಾರೆ.
ಮುಂಬೈ: ಮಹಿಳೆಯೊಬ್ಬರ ಒಪ್ಪಿಗೆಯಿಲ್ಲದೆ ಆಕೆಯ ಮೊಬೈಲ್ ಸಂಖ್ಯೆಯನ್ನು ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದ ಗ್ರೂಪ್ ಅಡ್ಮಿನ್ ಓರ್ವ ಇದೀಗ ಮುಂಬೈ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ಮುಷ್ತಾಕ್ ಅಲಿ ಶೇಖ್(24) ಬಂಧಿತ. ಮುಂಬೈನಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ, ಈತ ಮಹಿಳೆಯೊಬ್ಬರ ಫೋನ್ ನಂಬರ್ ಅನ್ನು ಆಕೆಯ ಒಪ್ಪಿಗೆಯಿಲ್ಲದೆ, ಅಶ್ಲೀಲ ಫೋಟೋಗಳು, ವಿಡಿಯೋ ಮತ್ತು ಇತರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಟ್ರಿಪಲ್ ಎಕ್ಸ್‌ಎಕ್ಸ್‌ಎಕ್ಸ್ ಹೆಸರಿನ ವಾಟ್ಸಪ್ ಗ್ರೂಪ್ ಗೆ ಸೇರಿಸಿದ್ದ.
ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
