ಅಡ್ಮಿನ್ ಅಲ್ಲದವನಿಗೂ ಜೈಲೂಟ ತಂದ ವಾಟ್ಸಪ್ ಮೆಸೇಜ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 2:58 PM IST
WhatsApp forward in group lands ‘default’ admin in jail for 5 months
Highlights

ಈ ಸಾಮಾಜಿಕ ತಾಣಗಳ ಬಳಕೆ ಮಿತಿಯಲ್ಲಿ ಇರಬೇಕು. ಇಲ್ಲವಾದಲ್ಲಿ ಜೈಲೂಟವನ್ನು ತಂದಿಡಬಹುದು. ಅಷ್ಟಕ್ಕೂ ನಿಜವಾಗಿ ಅಪರಾಧ ಮಾಡಿದ್ದರೆ ಶಿಕ್ಷೆ ಆಗುವುದು ಸರಿ.. ಆದರೆ ಯಾರೋ ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆಯಾದರೆ....

ಭೋಪಾಲ್(ಜು.23) ಮಧ್ಯಪ್ರದೇಶದ 21 ವರ್ಷದ ಯುವಕ ಕಳೆದ 5 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅಷ್ಟಕ್ಕೂ ಆತ ಮಾಡಿರುವ ಅಂಥ ಅಪರಾಧವೇನು ಎಂದು ಕೇಳಬೇಡಿ. ವಾಟ್ಸಪ್ ಗ್ರೂಪ್ ಒಂದರ ಅಡ್ಮಿನ್ ಆಗಿದ್ದೆ ಅವರನ್ನು ಜೈಲಿನಲ್ಲಿರುವಂತೆ ಮಾಡಿದೆ.

ಬಿಎಸ್ ಸಿ ವಿದ್ಯಾರ್ಥಿ ಜುನೇದ್ ಖಾನ್ ಕಳೆದ 5 ತಿಂಗಳಿನಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ. ಆತ ನಿಜವಾಗಿಯೂ ಅಪರಾಧ ಎಂದು ಪರಿಗಣಿಸಿರುವ ಸಂದೇಶ ರವಾನೆಯಾದ ವಾಟ್ಸಪ್ ಗ್ರೂಪ್ ಅಡ್ಮಿನ್ ಆಗಿರಲಿಲ್ಲ. ಈ ಮುಂಚಿನ ಅಡ್ಮಿನ ಗ್ರೂಪ್ ತೊರೆದ ಕಾರಣ ಡಿಪಾಲ್ಟ್ ಅಡ್ಮಿನ್ ಆಗಿದ್ದ ಎಂದು ಜುನೇದ್ ಕುಟುಂಬದವರು ವಾದ ಮುಂದಿಟ್ಟಿದ್ದಾರೆ.

ಸಮಾಜಕ್ಕೆ ಮಾರಕವಾದ ಆಕ್ಷೇಪಾರ್ಹ ಸಂದೇಶವೊಂದು ವಾಟ್ಸಪ್ ಗ್ರೂಪ್ ನಲ್ಲಿ ಹರಿದಾಡಿತ್ತು. ಸ್ಥಳೀಯರು ಇದರ ಮಾಹಿಒತಿ ಪಡೆದುಕೊಂಡು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಗಮನಕ್ಕೆ ಬಂದು ಕ್ರಮ ತೆಗೆದುಕೊಳ್ಳುವ ಸಮಯಕ್ಕೆ ಮೂಲ ಅಡ್ಮಿನ್ ಇರ್ಫಾನ್ ಗ್ರೂಪ್ ನಿಂದ ಹೊರ ಹೋಗಿದ್ದರು. ಈ ಸಂದರ್ಭದಲ್ಲಿ ಅಡ್ಮಿನ್ ಆಗಿದ್ದ ಜುನೇದ್ ಅವರನ್ನು ಐಟಿ ಕಾನೂನಿನ ಐಪಿಸಿ ಸೆಕ್ಷನ್ 124 ಎ ಅಡಿ ಬಂಧಿಸಲಾಗಿತ್ತು.

loader