ಜಗತ್ತಿನ ಶೇ.60% ಮಂದಿ ವಾಟ್ಸ್ ಅಪ್'ನಲ್ಲಿ ಮೆಸೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ವಾಟ್ಸ್ ಅಪ್ ಬಳಕೆದಾರರು ಕಂಗಾಲಾಗಿದ್ದಾರೆ.
ಲಂಡನ್(ನ.03): ಸಾಮಾಜಿಕ ಜಾಲತಾಣವಾದ ವಾಟ್ಸ್'ಆಪ್ ಜಗತ್ತಿನಾದ್ಯಂತ ಕೆಲಸ ಮಾಡುವುದು ಸ್ಥಗಿತಗೊಂಡಿದೆ. ವಾಟ್ಸ್ ಅಪ್ ಸರ್ವರ್ ಕ್ರ್ಯಾಶ್ ಆಗಿರುವ ಹಿನ್ನಲೆಯಲ್ಲಿ ವಾಟ್ಸ್ ಅಪ್ ಮೆಸೆಂಜರ್ ಸೇವೆ ಸ್ಥಗಿತಗೊಂಡಿದೆ.
ಜಗತ್ತಿನ ಶೇ.60% ಮಂದಿ ವಾಟ್ಸ್ ಅಪ್'ನಲ್ಲಿ ಮೆಸೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ವಾಟ್ಸ್ ಅಪ್ ಬಳಕೆದಾರರು ಕಂಗಾಲಾಗಿದ್ದಾರೆ. ಒಂದು ಗಂಟೆಗಳ ಕಾಲ ವಾಟ್ಸ್ ಅಪ್ ಕ್ರ್ಯಾಶ್ ಆಗಿತ್ತು.
ಭಾರತ, ಸಿಂಗಾಪುರ್, ಲಂಡನ್, ಜರ್ಮನಿ ಸೇರಿದಂತೆ ಬಹುತೇಕ ದೇಶದಲ್ಲಿ ವಾಟ್ಸ್ ಅಪ್ ಕೈಕೊಟ್ಟಿದೆ.
ಬಳಕೆದಾರರು ಕ್ಷಮೆ ಕೋರಿರುವ ವಾಟ್ಸ್ ಅಪ್ ಸಂಸ್ಥೆ, ಈ ಕುರಿತು ತಂತ್ರಜ್ಞರು ಕೆಲಸ ಮಾಡುತ್ತಿರವುದಾಗಿ ಸಂಸ್ಥೆ ಹೇಳಿಕೊಂಡಿದೆ.
