Asianet Suvarna News Asianet Suvarna News

500 ಮತ್ತು 1000 ನೋಟುಗಳ ಮುದ್ರಣ ಬಂದ್; ಜನ ಏನು ಮಾಡಬೇಕು?

500 ಮತ್ತು 1000 ನೋಟುಗಳ ಮುದ್ರಣ ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ.  

ನಾಳೆ, ನಾಳಿದ್ದು ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ನಿಮಗೆ ಹಣ ಸಿಗುವುದಿಲ್ಲ.

what to do public due to ban 500 1000 currency ban

ಬೆಂಗಳೂರು (ನ.08): 500 ಮತ್ತು 1000 ನೋಟುಗಳ ಮುದ್ರಣ ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ.  

 

ನಾಳೆ, ನಾಳಿದ್ದು ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ನಿಮಗೆ ಹಣ ಸಿಗುವುದಿಲ್ಲ.

ಜನ ಏನು ಮಾಡಬೇಕು?

1. ಯಾವ ಯಾವ ನೋಟುಗಳ ಅಮಾನ್ಯ?

- ಮಂಗಳವಾರ ಮಧ್ಯರಾತ್ರಿಯಿಂದಲೇ 500 ಮತ್ತು 1,000 ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ

2. ನೋಟು ಬದಲಿಸಿಕೊಳ್ಳಲು ಅವಕಾಶವಿದೆಯೇ?

- ಇದೆ. ನವೆಂಬರ್ 10ರಿಂದ ಡಿ.30ರವರೆಗೆ ಅಂದರೆ 50 ದಿನಗಳ ಒಳಗಾಗಿ ಸಾರ್ವಜನಿಕರು ನೋಟುಗಳನ್ನು ಬದಲಿಸಬಹುದು

3. ಬದಲಾವಣೆ ಹೇಗೆ?

- ಸೂಕ್ತ ಗುರುತಿನ ಚೀಟಿ ನೀಡಿ ಬ್ಯಾಂಕುಗಳು ಅಥವಾ ಅಂಚೆ ಕಚೇರಿಯಲ್ಲಿ ನೋಟು ಬದಲಾವಣೆ ಮಾಡಬೇಕು

4. ಇಂದು ಬ್ಯಾಂಕ್ ಓಪನ್ ಇರುತ್ತವೆಯೇ?

- ಇಲ್ಲ. ಇಂದು ಎಲ್ಲ ಬ್ಯಾಂಕುಗಳಿಗೆ ರಜೆ. ಆದರೆ, ಸಾರ್ವಜನಿಕರಿಗೆ ಅವಕಾಶ ನೀಡದೇ ಒಳಗೇ ಕೆಲಸ ಮಾಡುತ್ತಿರುತ್ತಾರೆ

5. ಎಟಿಎಂಗಳು ಕೆಲಸ ಮಾಡುತ್ತವೆಯೇ?

ಕೆಲವು ಎಟಿಎಂಗಳು ಕೂಡ ಕೆಲಸ ಮಾಡಲಿಕ್ಕಿಲ್ಲ

6. 100, 50, 20, 10 ಮುಖಬೆಲೆಯ ನೋಟುಗಳ ಕಥೆ ಏನು?

- ಏನೂ ಆಗಲ್ಲ. ಇತರೆ ಮುಖಬೆಲೆಯ ನೋಟುಗಳು, ನಾಣ್ಯಗಳು, ಚೆಕ್, ಡಿಡಿ, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

7. ನೋಟುಗಳ ಚಲಾವಣೆಯಲ್ಲಿ ವಿನಾಯಿತಿ ಇದೆಯೇ?

- ಇದೆ. ರೈಲು, ಬಸ್ ನಿಲ್ದಾಣಗಳು, ಏರ್‌ಪೋರ್ಟ್‌ಗಳು, ಕೆಮಿಸ್ಟ್‌ಗಳು, ಸರ್ಕಾರಿ ಆಸ್ಪತ್ರೆಗಳು, ಸಿಎನ್‌ಜಿ ಗ್ಯಾಸ್ ಸ್ಟೇಷನ್‌ಗಳು, ಪೆಟ್ರೋಲ್ ಪಂಪ್‌ಗಳು, ಚಿಲ್ಲರೆ ಅಂಗಡಿಗಳು, ಸ್ಮಶಾನ, ರಾಜ್ಯ ಸರ್ಕಾರಗಳ ಅಡಿಯಲ್ಲಿರುವ ಹಾಲಿನ ಬೂತ್‌ಗಳಲ್ಲಿ ನ.11ರ ಮಧ್ಯರಾತ್ರಿಯವರೆಗೂ ನೋಟುಗಳನ್ನು ಪಡೆದುಕೊಳ್ಳಬಹುದು. ಆದರೆ, ದಾಖಲೆಗಳನ್ನು ಇಟ್ಟುಕೊಳ್ಳಬೇಕು

8. ಮುಂದೆ ಹೊಸ ನೋಟುಗಳು ಬರುತ್ತವೆಯೇ?

- ಹೌದು, 500 ಮತ್ತು 2,000 ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರವೇ ಮುದ್ರಿಸಲಾಗುತ್ತದೆ

9. ಎಟಿಎಂನಲ್ಲಿ ಹಣ ತೆಗೆಯಲು ನಿಬಂಧನೆಗಳಿವೆಯೇ?

ಇದೆ, ದಿನಕ್ಕೆ ಒಂದು ಕಾರ್ಡ್‌ಗೆ 2,000, ಬ್ಯಾಂಕುಗಳಲ್ಲಿ ದಿನಕ್ಕೆ 10,000, ವಾರಕ್ಕೆ 20,000 ಹಣ ತೆಗೆಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಲಿದೆ

10. ವಿನಿಮಯಕ್ಕೆ ಎಲ್ಲೆಲ್ಲಿ ಅವಕಾಶ?

ಯಾವುದೇ ಬ್ಯಾಂಕುಗಳು, ಪ್ರಧಾನ ಅಂಚೆ ಕಚೇರಿ, ಉಪ ಅಂಚೆ ಕಚೇರಿ, ಪ್ರವಾಸಿಗರಿಗೆ ಏರ್ಪೋರ್ಟ್‌ಗಳಲ್ಲಿ ಬದಲಾವಣೆ ಅವಕಾಶ

11. ಎಷ್ಟು ವಿನಿಮಯ ಮಾಡಿಕೊಳ್ಳಬಹುದು?

ನ. 24ರ ವರೆಗೆ ಕೇವಲ 4 ಸಾವಿರವನ್ನು ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ

12. ವಿನಿಮಯಕ್ಕೆ ಯಾವ ದಾಖಲೆ ಬೇಕು?

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್

 

 

Latest Videos
Follow Us:
Download App:
  • android
  • ios