ಕೆಲಸದ ವಿಚಾರದಲ್ಲಿ ಶಿಸ್ತು, ಸಂಯಮ, ಅಚ್ಚುಕಟ್ಟು ಕಾಪಾಡಬೇಕು ಎಂದು ಬಿಜೆಪಿ ಸಂಸದರಿಗೆ, ಶಾಸಕರಿಗೆ, ಪಕ್ಷದ ಕಾರ್ಯಕರ್ತರಿಗೆ ಸದಾ ಎಚ್ಚರಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶ ಸಂಸದರಿಗೂ ಕೂಡಾ ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಕೆಲಸಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಏನು ತಿನ್ನಬೇಕು ಎಂಬುದರ ಬಗ್ಗೆ!
ನವದೆಹಲಿ (ಮಾ.23): ಕೆಲಸದ ವಿಚಾರದಲ್ಲಿ ಶಿಸ್ತು, ಸಂಯಮ, ಅಚ್ಚುಕಟ್ಟು ಕಾಪಾಡಬೇಕು ಎಂದು ಬಿಜೆಪಿ ಸಂಸದರಿಗೆ, ಶಾಸಕರಿಗೆ, ಪಕ್ಷದ ಕಾರ್ಯಕರ್ತರಿಗೆ ಸದಾ ಎಚ್ಚರಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶ ಸಂಸದರಿಗೂ ಕೂಡಾ ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಕೆಲಸಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಏನು ತಿನ್ನಬೇಕು ಎಂಬುದರ ಬಗ್ಗೆ!
ಪ್ರಧಾನಿ ನರೇಂದ್ರ ಮೋದಿ ಸಂಸದರನ್ನುದ್ದೇಶಿಸಿ, ಆರೋಗ್ಯ ಟಿಪ್ಸ್ ಗಳನ್ನು ನೀಡಿದ್ದು, ಇಂತಿಂಥ ಆಹಾರಗಳನ್ನು ನೂತನ ಮುಖ್ಯಮಂತ್ರಿ ಆದಿತ್ಯನಾಥ್ ರವರಲ್ಲಿ ಕೇಳುವಂತಿಲ್ಲವೆಂದಿದ್ದಾರೆ.
ಮುಂದಿನ 2 ವರ್ಷಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಈಗಿನಿಂದಲೇ ಬಿಜೆಪಿ ಪ್ರಣಾಳಿಕೆಗೆ ತಯಾರಿ ಶುರು ಮಾಡಿದ್ದಾರೆ. ಶಾಸಕರು ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಪಟ್ಟಿಯನ್ನೇ ನೀಡಿದ್ದಾರೆ. ಬಡವರ ಪರವಾಗಿ ನೀತಿಗಳನ್ನು ರೂಪಿಸಲು, ಪ್ರಾಥಮಿಕ ಆರೋಗ್ಯ ಚಿಕಿತ್ಸೆ, ಗ್ರಾಮೀಣ ಪ್ರದೇಶಗಳಲ್ಲಿ ರೈಲು ಸೇವೆ ಅಭಿವೃದ್ಧಿಪಡಿಸುವುದರ ಬಗ್ಗೆ ಶಾಸಕರಿಂದ ಸಲಹೆ ಕೇಳಿದರು.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಮುಖ ಸುಧಾರಣೆಗಳು, ಯೋಜನೆಗಳನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಜಾರಿಗೊಳಿಸಲು ಶಾಸಕರಿಗೆ ಸಹಕರಿಸಿ ಎಂದು ಸಂಸದರಿಗೆ ಮೋದಿ ಕೇಳಿಕೊಂಡಿದ್ದಾರೆ.
