ಮೇವು ಖರೀದಿ ಹಗರಣದಲ್ಲಿ ಮೂರು ವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಏನು ಕೆಲಸ ಮಾಡುತ್ತಾರೆ ಗೊತ್ತಾ..?

ಪಾಟ್ನಾ (ಜ.07): ಮೇವು ಖರೀದಿ ಹಗರಣದಲ್ಲಿ ಮೂರು ವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಏನು ಕೆಲಸ ಮಾಡುತ್ತಾರೆ ಗೊತ್ತಾ..?

ಅವರಿಗೆ ತೋಟವನ್ನು ನೋಡಿಕೊಳ್ಳುವ ಕೆಲಸವನ್ನು ಜೈಲಿನಲ್ಲಿ ನೀಡಲಾಗಿದೆಯಂತೆ. ಇದರಿಂದ ಅವರಿಗೆ ಪ್ರತಿದಿನ 93ರು. ನೀಡಲಾಗುತ್ತದೆ.

ಆರ್’ಜೆಡಿ ಮುಖಂಡ ಲಾಲು ಅವರಿಗೆ ಕಳೆದ ಒಂದು ದಿನಗಳ ಹಿಂದೆಯಷ್ಟೇ ಸಿಬಿಐ ಕೋರ್ಟ್ ಮೂರುವರೆ ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 10 ಲಕ್ಷ ರು ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಗಿತ್ತು.