*ಕಾಂಗ್ರೆಸ್ ಸರ್ಕಾರ ಹಲವು ರೈತ ಪರ ಕ್ರಮ ತೆಗೆದುಕೊಂಡಿದೆ. - ಶೇ.22* ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರದ್ದು ಕೃಷಿಕರ ಪರ ಸರ್ಕಾರವಾಗಿರಬಹುದು ಶೇ.40*ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಹೀಗಾಗಿ ಸಿದ್ದರಾಮಯ್ಯ ಅವರದ್ದು ರೈತ ಸ್ನೇಹಿ ಸರ್ಕಾರವಲ್ಲ - ಶೇ.29*ಈ ಬಗ್ಗೆ ನಮಗೆ ಯಾವುದೇ ಮಾಹಿತಿಯೂ ಗೊತ್ತಿಲ್ಲ - ಶೇ.8

ಬೆಂಗಳೂರು(ಡಿ.6): ಸತತ ಬರಗಾಲ, ರೈತರ ಸರಣಿ ಆತ್ಮಹತ್ಯೆ, ಬೆಲೆ ಕುಸಿತದಿಂದಾಗಿ ಸರ್ಕಾರದ ಬಗ್ಗೆ ಈ ಮೊದಲು ಕೃಷಿಕರು ಹಾಗೂ ಶ್ರೀಸಾಮಾನ್ಯರ ವಲಯದಲ್ಲಿ ಅಸಮಾಧಾನ ಕಂಡುಬಂದಿತ್ತು. ಆದರೆ ಸಹಕಾರಿ ಬ್ಯಾಂಕುಗಳಲ್ಲಿ 50 ಸಾವಿರ ರು.ವರೆಗಿನ ಸಾಲ ಮನ್ನಾ ಮಾಡುವ ನಿರ್ಧಾರ ಹಾಗೂ ಈ ವರ್ಷ ಬರಗಾಲ ನೀಗಿಸು ವಷ್ಟು, ಭೀಕರ ಪ್ರವಾಹ ಬಂದು ಸಮಸ್ಯೆ ಆಗದಷ್ಟು ಸಮತೋಲಿತವಾಗಿ ಸುರಿದ ಮಳೆಯಿಂದಾ ಶ್ರೀಸಾಮಾನ್ಯರ ಕೋಪ ತಗ್ಗಿರುವಂತೆ ಕಾಣುತ್ತಿದೆ.

ಸರ್ಕಾರ ರೈತರ ಪರವಾಗಿ ಇರಬಹುದು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗಿದೆ. ಆದರೆ 60 ವರ್ಷ ಮೇಲ್ಪಟ್ಟವರು ಮಾತ್ರ ಇದು ರೈತ ವಿರೋಧಿ ಸರ್ಕಾರ ಎಂಬ ರೀತಿ ಭಾವನೆ ವ್ಯಕ್ತಪಡಿಸಿದ್ದಾರೆ. ಅಹಿಂದ ವರ್ಗದಲ್ಲಿ ಸಿದ್ದು ಸರ್ಕಾರದ ಬಗ್ಗೆ ಒಲವು ಕಂಡುಬಂದಿದೆ. ಒಕ್ಕಲಿಗರು ಮಾತ್ರ ಇದು ಖಂಡಿತವಾಗಿಯೂ ರೈತಸ್ನೇಹಿ ಸರ್ಕಾರವಲ್ಲ ಎಂದು ಹೇಳಿದ್ದಾರೆ. ಆದರೆ ಲಿಂಗಾಯತರಲ್ಲಿ ಅಂತಹ ಆಕ್ರೋಶ ಕಂಡುಬಂದಿಲ್ಲ. ಮುಂಬೈ- ಕರ್ನಾಟಕದ ಶೇ.76ರಷ್ಟು ಮಂದಿ ಸರ್ಕಾರದ ಪರವಾಗಿ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಳೇ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೈ-ಕದಲ್ಲೂ ಒಳ್ಳೆಯ ಅಭಿಪ್ರಾಯ ಇದೆ.