ಬಿ.ಸಿ ಪಾಟೀಲ್ ನಿರ್ಧಾರವೇನು..?

First Published 10, Jun 2018, 11:14 AM IST
What Is The Next Step Of BC Patil
Highlights

ಮತದಾರರೇ ನನ್ನ ಹೈಕಮಾಂಡ್‌. ನಾನು ಎಲ್ಲಿಯೂ ಹೋಗಿಲ್ಲ. ಎಂ.ಬಿ. ಪಾಟೀಲ್‌ ಸೇರಿದಂತೆ ಯಾರ ತಂಡದಲ್ಲಿಯೂ ನಾನಿಲ್ಲ ಎಂದು ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.
 

ಹಾವೇರಿ: ಮತದಾರರೇ ನನ್ನ ಹೈಕಮಾಂಡ್‌. ನಾನು ಎಲ್ಲಿಯೂ ಹೋಗಿಲ್ಲ. ಎಂ.ಬಿ. ಪಾಟೀಲ್‌ ಸೇರಿದಂತೆ ಯಾರ ತಂಡದಲ್ಲಿಯೂ ನಾನಿಲ್ಲ ಎಂದು ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ನನ್ನನ್ನು ಸಂಪರ್ಕಿಸಿದ್ದಾರೆ. ದುಡುಕಿನ ನಿರ್ಧಾರ ಬೇಡ ಎಂದಿದ್ದಾರೆ. ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನವಿದೆ. ಆದರೆ, ಗುಂಪುಗಾರಿಕೆ ಮಾಡಿಲ್ಲ. ನಾನು ಕ್ಷೇತ್ರದಲ್ಲಿಯೇ ಇದ್ದು, ಸೋಮವಾರ ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ಹಳೆ ಧಾರವಾಡ ಜಿಲ್ಲೆಯ ಗದಗ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ನನಗೆ ಕೊಡಿ ಎಂದು ಕೇಳಿದ್ದೇನೆ. ಸಚಿವ ಸ್ಥಾನ ಕೊಟ್ಟಿಲ್ಲ ಎಂದು ನಾನು ಯಾರ ಗುಂಪಿನೊಂದಿಗೂ ಹೋಗಿಲ್ಲ. ಬೇರೆ ಪಕ್ಷದವರು ನನ್ನನ್ನು ಸಂಪರ್ಕಿಸಿಲ್ಲ. ಈಗ ಸಚಿವ ಸ್ಥಾನ ಸಿಗದೇ ಇದ್ದರೂ ಮುಂದೆ ಒಳ್ಳೆಯ ದಿನಗಳು ಬರಬಹುದು. ಆ ದಿನಕ್ಕಾಗಿ ಕಾಯುತ್ತೇನೆ ಎಂದರು.

loader