ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಸಾಧಿಸಲು ಹೆಣಗಾಡುತ್ತಿರುವ ಬಿಜೆಪಿ ಗ್ರಾಮೀಣ ಭಾಗದಲ್ಲಿ ಪ್ರಭಾವ ಬೀರಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿಂತೆಗೆ ಕಾರಣವಾಗಿದೆ.
ಕೋಲ್ಕತಾ(ಡಿ.31): ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಸಾಧಿಸಲು ಹೆಣಗಾಡುತ್ತಿರುವ ಬಿಜೆಪಿ ಗ್ರಾಮೀಣ ಭಾಗದಲ್ಲಿ ಪ್ರಭಾವ ಬೀರಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿಂತೆಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ತಾವು ಕೂಡ ಹಿಂದು ಪರ ಸಹಿಷ್ಣುತೆ ಹೊಂದಿರುವ ಬಗ್ಗೆ ಸಂದೇಶ ರವಾನಿಸಿದ್ದಾರೆ. ಜೊತೆಗೆ ತಮ್ಮ ತಂತ್ರಗಾರಿಕೆಯನ್ನೂ ಬದಲಿಸಿ ಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಶಬಾಂಗ್ ಮತ್ತು ದಕ್ಷಿಣ ಕಾಂತಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರೂ 37476 ಮತಗಳನ್ನು ಪಡೆದು ತೃಣಮೂಲ ಕಾಂಗ್ರೆಸ್‌ಗೆ ಪೈಪೋಟಿ ನೀಡಿತ್ತು. ಇದು ಮಮತಾ ಬ್ಯಾನರ್ಜಿ ಅವರ ಚಿಂತೆಗೆ ಕಾರಣವಾಗಿದೆ.
ಡಿ.26ರಂದು ಕಪಿಲಮುನಿ ಆಶ್ರಮ ದಲ್ಲಿ ಸ್ವಾಮಿ ಜ್ಞಾನದಾಸ್‌ಜೀ ಜೊತೆ ಮಮತಾ ಬ್ಯಾನರ್ಜಿ ಗಂಟೆಗೂ ಹೆಚ್ಚು ಸಮಯ ಕಳೆದಿದ್ದಾರೆ. ಮಠಕ್ಕೆ ಆಗಮಿಸುವ ಭಕ್ತರನ್ನು ಭೇಟಿಯಾಗಿದ್ದಾರೆ.
