ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ರಾಜ್ಯಧ್ವಜ ವಿನ್ಯಾಸ ಮಾಡಿ, ಕಾನೂನಿನ ಚೌಕಟ್ಟು ನೀಡಲು ರಾಜ್ಯ ಸರ್ಕಾರವೇನೋ ಸಮಿತಿ ರಚಿಸಿದೆ. ಆದರೆ ಈ ಬಗ್ಗೆ ರಾಜ್ಯ ಬಿಜೆಪಿಯ ನಿಲುವೇನು? ಇನ್ನೂ ರಾಜ್ಯ ಬಿಜೆಪಿ ಗೊಂದಲದಲ್ಲಿದೆಯೇ? ಈ ಕುರಿತ ಸವಿವರ ವರದಿ ಇಲ್ಲಿದೆ.
ಬೆಂಗಳೂರು (ಜು.30): ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ರಾಜ್ಯಧ್ವಜ ವಿನ್ಯಾಸ ಮಾಡಿ, ಕಾನೂನಿನ ಚೌಕಟ್ಟು ನೀಡಲು ರಾಜ್ಯ ಸರ್ಕಾರವೇನೋ ಸಮಿತಿ ರಚಿಸಿದೆ. ಆದರೆ ಈ ಬಗ್ಗೆ ರಾಜ್ಯ ಬಿಜೆಪಿಯ ನಿಲುವೇನು? ಇನ್ನೂ ರಾಜ್ಯ ಬಿಜೆಪಿ ಗೊಂದಲದಲ್ಲಿದೆಯೇ? ಈ ಕುರಿತ ಸವಿವರ ವರದಿ ಇಲ್ಲಿದೆ.
ಕರ್ನಾಟಕ ರಾಜ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ ಅನ್ನೋದು ಮೊದಲು ಸ್ಪಷ್ಟವಾಗಲಿ ಎನ್ನುತ್ತಿರುವ ರಾಜ್ಯ ಬಿಜೆಪಿ ನಾಯಕರು, ಈ ಬಗ್ಗೆ ಕಾನೂನು ತಜ್ಞರಿಂದ ರಾಜ್ಯ ಸರ್ಕಾರ ವರದಿ ಪಡೆದು ಸ್ಪಷ್ಟಪಡಿಸಲಿ ಎನ್ನುತ್ತಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ಇದು ರಾಜ್ಯ ನಾಯಕರ ಮಾತಾದರೆ ಅತ್ತ ಪ್ರಧಾನಿ ಮೋದಿ ನಾಡಧ್ವಜದ ವಿಚಾರ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಸೇರಿದಂತೆ ವಿವಾದಾಸ್ಪದ ವಿಚಾರಗಳ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ಸಂಸದರ ಸಭೆಯನ್ನು ನಡೆಸಲು ಮುಂದಾಗಿದ್ದಾರೆ. ನಾಡಧ್ವಜದ ಬಗ್ಗೆ ಸ್ಪಷ್ಟ ನಿಲುವು ತಳೆಯಲು ರಾಜ್ಯ ಬಿಜೆಪಿ ಸಂಸದರ ಜತೆ ಮೋದಿ ಸಭೆ
ಮುಂದಿನ ವಾರ ನಡೆಯಲಿದೆ
ರಾಜ್ಯ ಬಿಜೆಪಿ ಸಂಸದರೊಂದಿಗೆ ಪ್ರಧಾನಮಂತ್ರಿ ಸಭೆ
ನಾಡಧ್ವಜದ ಬಗ್ಗೆ ಬಿಜೆಪಿಯ ನಿಲುವು ಅಂತಿಮಗೊಳಿಸುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಈ ವೇಳೆ ಈ ಬಗ್ಗೆ ಬಿಜೆಪಿ ಸ್ಪಷ್ಟ ನಿಲುವು ಕೈಗೊಂಡು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ. ಅಲ್ಲಿಯವರೆಗೂ ಈ ವಿವಾದದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೇ ಮೌನತಂತ್ರ ಅನುಸರಿಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
