ಈ ಸರ್ಕಾರದ ಎಲ್ಲಾ ಮಂತ್ರಿಗಳ ಬಗ್ಗೆ ನಮಗೆ ಸಂತೋಷವಿದೆ. ಅವರ ಸಾಧನೆ ಬಗ್ಗೆ ತೃಪ್ತಿಯೂ ಇದೆ. ಯಾವುದೇ ಆಕ್ಷೇಪಗಳೂ ಇಲ್ಲ – ಶೇ.11ಮಂತ್ರಿಗಳ ಕಾರ್ಯವೈಖರಿ ಬಗ್ಗೆ ನಮಗೆ ಸಂಪೂರ್ಣ ಅಲ್ಲದೇ ಇದ್ದರೂ ಒಂದಷ್ಟು ಮಟ್ಟಿಗೆ ಸಂತೋಷವಿದೆ – ಶೇ. 32ತೀರಾ ಸಂತೋಷ, ಸಂಪೂರ್ಣ ಕಳಪೆ ಅಲ್ಲದಿದ್ದರೂ ಸಿದ್ದರಾಮಯ್ಯ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳ ಕಾರ್ಯವೈಖರಿ ತೃಪ್ತಿದಾಯಕವಾಗಿದೆ – ಶೇ. 15ಸಚಿವರ ವಿರುದ್ಧ ಹಲವು ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಮಂತ್ರಿಗಳ ಕಾರ್ಯವೈಖರಿ ಒಂದಷ್ಟು ಅಸಮಾಧಾನವಿದೆ – ಶೇ. 26ಹಗರಣ, ಭ್ರಷ್ಟಾಚಾರ ಆರೋಪಗಳು ಹಲವು ಮಂತ್ರಿಗಳ ಮೇಲಿದೆ. ಹೀಗಾಗಿ ನಮಗೆ ಸಂತೋಷವಾಗಿಲ್ಲ – ಶೇ.12ಈ ಬಗ್ಗೆ ನಮಗೆ ಯಾವುದೇ ರೀತಿಯಾದ ಮಾಹಿತಿ ಇಲ್ಲ – ಶೇ. 4
ಬೆಂಗಳೂರು(ಡಿ.7): ಈ ಸರ್ಕಾರ ಮೊದಲ ವರ್ಷ ಪೂರೈಸಿದಾಗಿನಿಂದ ಪ್ರತಿವರ್ಷವೂ ಸಚಿವರು ಹೇಗೆ ಕೆಲಸ ಮಾಡಿದ್ದಾರೆಂಬುದರ ಮೌಲ್ಯಮಾಪನ ನಡೆಸಲಾಗುತ್ತದೆ ಎಂಬ ಸುದ್ದಿಗಳು ಬರುತ್ತಿದ್ದವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಹೈಕಮಾಂಡ್ ಆಗಲಿ ಒಮ್ಮೆಯೂ ಅಂತಹ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲೇ ಇಲ್ಲ. ಈಗ ಜನರೇ ಮೌಲ್ಯಮಾಪನ ನಡೆಸಿದ್ದಾರೆ. ಒಟ್ಟಾರೆಯಾಗಿ ಶೇ.58ರಷ್ಟು ಜನರು ಸಿದ್ದರಾಮಯ್ಯ ಸಂಪುಟದ ಸಚಿವರ ಕಾರ್ಯವೈಖರಿ ಚೆನ್ನಾಗಿದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.

ಶೇ.36 ಮಂದಿ ಮಾತ್ರ ನಕಾರಾತ್ಮಕ ಉತ್ತರ ನೀಡಿದ್ದಾರೆ. ಹಾಗಂತ ಇದು ಎಲ್ಲ ಸಚಿವರೂ ಖುಷಿಪಡುವ ವಿಚಾರವಲ್ಲ. ಏಕೆಂದರೆ, ಸಚಿವರ ವೈಯಕ್ತಿಕ ಮೌಲ್ಯಮಾಪನ ಇಲ್ಲಿ ನಡೆದಿಲ್ಲ. ಆದರೆ, ಒಟ್ಟಾರೆ ಸಿದ್ದರಾಮಯ್ಯ ಸರ್ಕಾರದ ಸಂಪುಟದ ಸಾಧನೆಯ ಬಗ್ಗೆ ಧನಾತ್ಮಕ ಉತ್ತರ ಬಂದಿದೆ ಎಂಬುದು ಕಾಂಗ್ರೆಸ್ಸಿಗೆ ಖುಷಿ ತರುವ ವಿಚಾರವಂತೂ ಹೌದು.
ಬಿಜೆಪಿ ಹಾಗೂ ಜೆಡಿಎಸ್’ನವರು ಸಚಿವರ ನಿಷ್ಕ್ರಿಯತೆ ಬಗ್ಗೆ ಪ್ರಚಾರ ಮಾಡುವ ಮುನ್ನ ಇದನ್ನೊಮ್ಮೆ ಗಮನಿಸಬೇಕಾಗಿ ಬರಬಹುದು. ಮಂತ್ರಿಗಳ ವೈಫಲ್ಯವನ್ನು ಜನರಿಗೆ ತೋರಿಸಲು ಪ್ರತಿಪಕ್ಷಗಳು ವಿ-ಲವಾಗಿರುವ ಸೂಚಕ ಇದು ಎಂದು ವ್ಯಾಖ್ಯಾನಿಸಬಹುದು.
