ಒಂದು ತಿಂಗಳ ನಂತರ ಮಹತ್ವದ ನಿರ್ಧಾರ : ಬಿಸಿ ಪಾಟೀಲ್

What Is Next Step Of BC patil
Highlights

ಇನ್ನೂ ಒಂದು ತಿಂಗಳು ಕಾಯುತ್ತೇನೆ. ಅಷ್ಟರೊಳಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನನಗೆ ನನ್ನ ಮತದಾರರೇ ಹೈಕಮಾಂಡ್‌, ಮತದಾರರ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. 

ಹಿರೇಕೆರೂರು : ಇನ್ನೂ ಒಂದು ತಿಂಗಳು ಕಾಯುತ್ತೇನೆ. ಅಷ್ಟರೊಳಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನನಗೆ ನನ್ನ ಮತದಾರರೇ ಹೈಕಮಾಂಡ್‌, ಮತದಾರರ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದ ಮುಖಂಡರು ಏತಕ್ಕಾಗಿ ಸಚಿವ ಸ್ಥಾನ ನೀಡಲಿಲ್ಲ ಎಂಬುದು ತಿಳಿಯುತ್ತಿಲ್ಲ. ನನಗೆ ಸಚಿವ ಸ್ಥಾನ ಸಿಗಬಹುದು ಎಂಬ ಭರವಸೆ ಇತ್ತು. ಹಾವೇರಿ, ಗದಗ, ಧಾರವಾಡ ಭಾಗದ ಏಕೈಕ ಲಿಂಗಾಯತ ಶಾಸಕ ನಾನು. ನಾನು ಯಾವ ಬಣಕ್ಕೂ ಸೇರಿದವನಲ್ಲ ಎಂದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ಹಿರೇಕೆರೂರು-ರಟ್ಟೀಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಮಾತ್ರವಲ್ಲ ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಕೇಂದ್ರ ಹಾಗೂ ರಾಜ್ಯದ ಮುಖಂಡರು ಏತಕ್ಕಾಗಿ ಸ್ಥಾನ ನೀಡಲಿಲ್ಲ ಎಂಬುದು ತಿಳಿಯುತ್ತಿಲ್ಲ. ನನಗೆ ಸಚಿವ ಸ್ಥಾನ ಸಿಗಬಹುದು ಎಂಬ ಭರವಸೆ ಇತ್ತು. ಜಿಲ್ಲೆಯ ಎಲ್ಲ ಮುಖಂಡರ ಬೇಡಿಕೆಯೂ ಇದು ಆಗಿತ್ತು. ಹಾವೇರಿ, ಗದಗ, ಧಾರವಾಡ ಭಾಗದ ಏಕೈಕ ಲಿಂಗಾಯತ ಶಾಸಕ ನಾನು. ನಾನು ಯಾವ ಬಣಕ್ಕೂ ಸೇರಿದವನಲ್ಲ. ಇನ್ನಾದರೂ ಕೇಂದ್ರ ಹಾಗೂ ರಾಜ್ಯದ ಮುಖಂಡರು ಎಚ್ಚೆತ್ತು ನನಗೆ ಸಚಿವಸ್ಥಾನ ನೀಡಬೇಕು ಎಂದರು.

loader