ಅವಿಶ್ವಾಸ ನಿರ್ಣಯ ಮಂಡನೆ ದಿನವಾದ ಶುಕ್ರವಾರ ಮಾತನಾಡುತ್ತಾ ರಾಹುಲ್ ಗಾಂಧಿ ಭಾಷಣದ ವೇಳೆ ಪದ ಒಂದನ್ನು ಬಳಸಿದ್ದರು. ಆ ಪದದ ಅರ್ಥವನ್ನು ಜನರು ಹೆಚ್ಚು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಅದರಲ್ಲಿ ಕರ್ನಾಟಕವೇ ನಂ. 1 ಸ್ಥಾನದಲ್ಲಿದೆ. 

ನವದೆಹಲಿ: ಶುಕ್ರವಾರ ಅವಿಶ್ವಾಸ ಗೊತ್ತುವಳಿ ಪರ ಮಾತನಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾವೆಲ್ಲಾ ಈ ಸರ್ಕಾರದ ಜುಮ್ಲಾ ದಾಳಿಯ ಬಲಿಪಶುಗಳು ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅವರು ಇಂಥದ್ದೊಂದು ವಾಗ್ದಾಳಿ ನಡೆಸುತ್ತಲೇ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯ ಗಳ ನೆಟ್ಟಿಗರು, ಜುಮ್ಲಾ ಪದ ಅರ್ಥಕ್ಕಾಗಿ ಗೂಗಲ್‌ನಲ್ಲಿ ಭಾರೀ ಹುಡುಕಾಟ ನಡೆಸತೊಡಗಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಹುಲ್ ಈ ಪದ ಬಳಸಿದ ಕೆಲ ಹೊತ್ತಿನ ಬಳಿಕ ದಕ್ಷಿಣದ ರಾಜ್ಯಗಳಲ್ಲಿ ಇಂಟರ್‌ನೆಟ್‌ಲ್ಲಿ ಅತಿಹೆಚ್ಚು ಹುಡುಕಾಡಿದ ಪದವಾಗಿ ಜುಮ್ಲಾ ಹೊರಹೊಮ್ಮಿತ್ತು. ಅದರಲ್ಲೂ ಕರ್ನಾಟಕ ಇಂಥ ಹುಡುಕಾಟದಲ್ಲಿ ನಂ.1 ಸ್ಥಾನದಲ್ಲಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ಆದವು.