ಆಶ್ಚರ್ಯಕರ ಬೆಳವಣಿಗೆಯಲ್ಲಿ ವಾಟ್ಸಪ್‌ನಲ್ಲಿ ರವಾನಿಸಲಾದ 9 ಅಭ್ಯರ್ಥಿಗಳ ನಾಮಪತ್ರ ಮಾನ್ಯ ಮಾಡಲು ಪಶ್ಚಿಮ ಬಂಗಾಳ ಚುನಾವಣಾ ಆಯೋಗಕ್ಕೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶಿಸಿದೆ.

ಕೋಲ್ಕತ್ತಾ: ಆಶ್ಚರ್ಯಕರ ಬೆಳವಣಿಗೆಯಲ್ಲಿ ವಾಟ್ಸಪ್‌ನಲ್ಲಿ ರವಾನಿಸಲಾದ 9 ಅಭ್ಯರ್ಥಿಗಳ ನಾಮಪತ್ರ ಮಾನ್ಯ ಮಾಡಲು ಪಶ್ಚಿಮ ಬಂಗಾಳ ಚುನಾವಣಾ ಆಯೋಗಕ್ಕೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶಿಸಿದೆ.

ಗ್ರಾಮ ಪಂಚಾಯತ್ ಚುನಾವಣೆ ಗೆ ನಾಮಪತ್ರ ಸಲ್ಲಿಸಲು ತೆರಳಲು ದಕ್ಷಿಣ 24 ಪರಂಗಣ ಜಿಲ್ಲೆಯ ಭಂಗರ್‌ಗೆ ತೆರಳಲು ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಅಭ್ಯರ್ಥಿಗಳ ಪರ ವಾಗಿ ಸಿಪಿಎಂ -ಎಂಎಲ್ ರೆಡ್‌ಸ್ಟಾರ್ ನಾಯಕಿ ಶರ್ಮಿಷ್ಟಾ ಚೌಧರಿ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿ ಮಾನ್ಯ ಮಾಡಿದ ಕೋರ್ಟ್, ವಾಟ್ಸಪ್ ಮೂಲಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡುವಂತೆ ಸೂಚಿಸಿತು.