ಮಹಿಳೆ ಸ್ನಾನದ ದೃಶ್ಯ ರಹಸ್ಯ ಚಿತ್ರೀಕರಣ; ಗೊತ್ತಾಗಿದ್ದು ಫೇಸ್ ಬುಕ್ ಮೂಲಕ

First Published 3, Jul 2018, 2:56 PM IST
West Bengal cops hunt for businessman who secretly recorded woman’s video in bathroom
Highlights

ಆತ ಒಬ್ಬ ಉದ್ಯಮಿ.. ಆದರೆ ಮಾಡಿದ್ದು ಮಾತ್ರ ಹೇಸಿಗೆ ಕೆಲಸ. ಸುಮ್ಮನೆ ತಾನಾಯಿತು ತನ್ನಕೆಲಸವಾಯಿತು ಎಂದುಕೊಂಡಿದ್ದರೆ ಇದೀಗ ಜೈಲಿನ ಕಂಬಿ ಎಣಿಸುವ ಸ್ಥಿತಿಗೆ ಬರುತ್ತಿರಲಿಲ್ಲ. ಹಾಗಾದರೆ ಆತ ಮಾಡಿದ ಅಂಥ ಕೆಲಸ ಏನು?

ಕೋಲ್ಕತ್ತಾ[ಜು.3]  ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವ ದೃಶ್ಯವನ್ನು ಶೂಟ್ ಮಾಡಿ ಸಾಮಾಜಿಕ ತಾಣಕ್ಕೆ ಹಾಕಿದ್ದ ಉದ್ಯಮಿಯನ್ನು ಪೊಲೀಶರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಡಿಯೋ ಅಪ್ ಲೋಡ್ ಮಾಡಿದ್ದು ಅಲ್ಲದೇ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದ ಉದ್ಯಮಿಗೆ ಪೊಲೀಸರು ಟ್ರೀಟ್ ಮೆಂಟ್ ಕೊಡುತ್ತಾ ಇದ್ದಾರೆ.

ಮಾಲ್ಡಾ ಜಿಲ್ಲೆಯ 38 ವರ್ಷದ ಮಹಿಳೆ ದೂರು ದಾಖಲಿಸಿದ ನಂತರ ಉದ್ಯಮಿಯನ್ನು ಬಂಧಿಸಲಾಗಿದೆ. ಇಮ್ರಲ್ ಶೇಕ್ ಎಂಬ ಬಟ್ಟೆ ವ್ಯಾಪಾರಿ  ಮಹಿಳೆ ಸ್ನಾನ ಮಾಡುವ ದೃಶ್ಯ ಅಪ್ ಲೋಡ್ ಮಾಡಿದ ವಿಕೃತ ಕಾಮಿ.

ಒಂದೆಲ್ಲಾ ಒಂದು ನೆಪ ಒಡ್ಡಿ ಮಹಿಳೆಯ ಮನೆಗೆ ಬರುತ್ತಿದ್ದ ಆರೋಪಿ ಗೊತ್ತಿಲ್ಲದೆ ಕ್ಯಾಮರಾವೊಂದನ್ನು ಅಳವಡಿಕೆ ಮಾಡಿದ್ದಾನೆ. ದೃಶ್ಯವನ್ನು ಚಿತ್ರೀಕರಣ ಮಾಡಿ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ಕೆಲ ಸ್ಥಳೀಯರು ವಿಡಿಯೋ ನೋಡಿ ಮಹಿಳೆಗೆ ಸುದ್ದಿ ಮುಟ್ಟಿಸಿದ ನಂತರ ಆಕೆ ದೂರು ದಾಖಲಿಸಿದ್ದಾಳೆ.

loader