ದುಬೈನಲ್ಲಿ ಭಾರತೀಯರಿಗೆ ಪ್ರಧಾನಿ ನೀಡಿದ ಭರವಸೆ ಏನು.. ?

First Published 11, Feb 2018, 1:33 PM IST
well fulfil all your dreams PM Modi tells Indians in Dubai
Highlights

ಪಶ್ಚಿಮ ಏಷ್ಯಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ದುಬೈಗೆ ಭೇಟಿ ನೀಡಿದ್ದು, ಭಾನುವಾರ ಇಲ್ಲಿ ನೆಲೆಸಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ದುಬೈ : ಪಶ್ಚಿಮ ಏಷ್ಯಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ದುಬೈಗೆ ಭೇಟಿ ನೀಡಿದ್ದು, ಭಾನುವಾರ ಇಲ್ಲಿ ನೆಲೆಸಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

 ನೀವು ಭಾರತದ ಪ್ರತೀ ಭಾಗವನ್ನೂ ಕೂಡ ಪ್ರತಿನಿಧಿಸುತ್ತೀರಾ.  ಭಾರತ ಈಗ ಅಭಿವೃದ್ಧಿಯನ್ನು ಸಾಧಿಸುತ್ತಿರುವ ದೇಶವಾಗಿದೆ. ವ್ಯಾವಹಾರಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಲುವಾಗಿ ಸರ್ಕಾರ ಕಾರ್ಯಪೃವೃತ್ತವಾಗಿದೆ ಎಂದು ಪ್ರಧಾನಿ ಈ ವೇಳೆ ಹೇಳಿದ್ದಾರೆ.

ಅಲ್ಲದೇ ಇದೇ ವೇಳೆ ನೋಟು ಅಮಾನ್ಯೀಕರಣದ ಬಗ್ಗೆಯೂ ಕೂಡ ಪ್ರಧಾನಿ ಪ್ರಸ್ತಾಪಿಸಿದ್ದು, ಇದರಿಂದ ನಿದ್ದೆ ಕಳೆದುಕೊಂಡವರು ಮಾತ್ರವೇ ವಿರೋಧ ವ್ಯಕ್ತಪಡಿಸಿದ್ದಾರೆ. ಬಡಜನರು ನನ್ನ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ.

ನಾವು ದೀರ್ಘಾವಧಿಯ ಆಲೋಚನೆಗಳೊಂದಿಗೆ ಅನೇಕ ರೀತಿಯಾದ ಕಾರ್ಯಗಳನ್ನು ಕೈಗೊಂಡಿದ್ದೇವೆ. ನಮ್ಮ ಕಾರ್ಯಗಳು ಅಲ್ಪ ಕಾಲದ ಉಪಯೋಗಕ್ಕಲ್ಲ ಎಂದು ಹೇಳಿದ್ದಾರೆ.

loader