ಕಲಬುರಗಿ[ಜೂ.30] ಸಚಿವರ ಸ್ವಾಗತಕ್ಕೆ ಕಟ್ಟಿದ್ದ ಬ್ಯಾನರ್ ತೆರವು ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಸ್ವಾಗತಕ್ಕೆ ಹಾಕಿದ್ದ ಬ್ಯಾನರ್ ತೆರವು ಮಾಡುವ ವೇಳೆ ಅವಘಡ ಸಂಭವಿಸಿದೆ.

ಕಲಬುರಗಿ ಹೊರವಲಯದ ಹುಮನಾಬಾದ್  ರಸ್ತೆ ಬದಿ ಬಿದ್ದಿದ್ದ ಪ್ರಿಯಾಂಕ ಖರ್ಗೆ ಭಾವಚಿತ್ರವುಳ್ಳ ಬ್ಯಾನರ್ ಕಟೌಟ್ ತೆಗೆಯುವಾಗ ಯುವಕನಿಗೆ ವಿದ್ಯುತ್ ಶಾಕ್ ತಗುಲಿದೆ. ಶನಿವಾರ ಬೆಳಗಿನ ಜಾವವೇ ಅವಘಡ ಸಂಭವಿಸಿದೆ. ಇದಾದ ಮೇಲೆ ಯುವಕನ ಸಂಬಂಧಿಕರು ಮತ್ತು ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಧಾವಿಸಿದ ಪೊಲೀಶರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.