ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಘಟ್ಟವಾಗಿರುವ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೂ ಮುನ್ನಾ ದಿನವಾದ ನಿನ್ನೆ ರಾತ್ರಿ ಅರ್ಜುನ ನೇತೃತ್ವದ ಗಜಪಡೆಯ ತೂಕ ನಡೆಸಲಾಯಿತು. ಅರಮನೆ ಆವರಣ ಪ್ರವೇಶಿಸಿದ ನಂತರ ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದ ಪರಿಣಾಮ ಗಣನೀಯ ಪ್ರಮಾಣದಲ್ಲಿ ಆನೆಗಳು ತೂಕ ಹೆಚ್ಚಿಸಿಕೊಂಡಿವೆ.
ಮೈಸೂರು(ಸೆ.30): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಘಟ್ಟವಾಗಿರುವ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೂ ಮುನ್ನಾ ದಿನವಾದ ನಿನ್ನೆ ರಾತ್ರಿ ಅರ್ಜುನ ನೇತೃತ್ವದ ಗಜಪಡೆಯ ತೂಕ ನಡೆಸಲಾಯಿತು. ಅರಮನೆ ಆವರಣ ಪ್ರವೇಶಿಸಿದ ನಂತರ ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದ ಪರಿಣಾಮ ಗಣನೀಯ ಪ್ರಮಾಣದಲ್ಲಿ ಆನೆಗಳು ತೂಕ ಹೆಚ್ಚಿಸಿಕೊಂಡಿವೆ.
ಯಾವ.. ಆನೆ ಎಷ್ಟು ತೂಕ ?
ಆನೆ | ಆಗಸ್ಟ್ 18ರಂದು | ಸದ್ಯದ ತೂಕ | ಹೆಚ್ಚಳವಾದ ತೂಕ |
ಅರ್ಜುನ | 5250 ಕೆ.ಜಿ. | 5910 ಕೆ.ಜಿ | 660 ಕೆ.ಜಿ |
ಬಲರಾಮ | 4990 ಕೆ.ಜಿ | 5520 ಕೆ.ಜಿ. | 530 ಕೆ.ಜಿ |
ಅಭಿಮನ್ಯು | 4870 ಕೆ.ಜಿ. | 5190 ಕೆ.ಜಿ | 320 ಕೆ.ಜಿ . |
ಗಜೇಂದ್ರ | 4600 ಕೆ.ಜಿ | 5050 ಕೆ.ಜಿ. | 450 ಕೆ.ಜಿ |
ಭೀಮ | 3410 ಕೆ.ಜಿ | 3810 ಕೆ.ಜಿ. | 400 ಕೆ.ಜಿ |
ವಿಜಯ | 2770 ಕೆ.ಜಿ. | 2960 ಕೆ.ಜಿ | 190 ಕೆ.ಜಿ |
ವರಲಕ್ಷ್ಮಿ | 2830 ಕೆ.ಜಿ | 3030 ಕೆ.ಜಿ. | 200 ಕೆ.ಜಿ |
ಕಾವೇರಿ | 2820 ಕೆ.ಜಿ | 3065 ಕೆ.ಜಿ. | 245 ಕೆ.ಜಿ |
